ಮಹಿಂದ್ರಾ ಕನ್ಸ್ಟ್ರಕ್ಷನ್ ಇಕ್ವಿಪ್ಮೆಂಟ್ ವಿವಿದೋದ್ಧೇಶ ಉಪಯೋಗಿ ಮಶಿನ್ ಅನ್ನು ನೀಡಲು ಅದರ ಬ್ಯಾಕ್ಹೋ ಲೋಡರ್ ಹಾಗೂ ಅಟ್ಯಾಚ್ಮೆಂಟ್ಗಳ ರೇಂಜ್ ಅನ್ನು ವಿಸ್ತರಿಸುತ್ತಿದೆ. ಈ ರೀತಿಯಲ್ಲಿ, ನೀವು ಅಗೆಯುವುದು, ಒಡೆಯುವುದು, ಲೋಡ್ ಮಾಡುವುದು ಮುಂತಾದ ಪ್ರತಿ -ಕೆಲಸಕ್ಕಾಗಿ ಒಂದು ಇಕ್ವಿಪ್ಮೆಂಟ್ ಆನ್ನು ಹೊಂದಿರುತ್ತೀರಿ ಹಾಗೂ ನಿಮ್ಮ ಅಗತ್ಯತೆಗೆ ಅನುಗುಣವಾಗಿ ವೈವಿಧ್ಯಮಯ ಬಳಕೆಗಳಿಗೆ ಸರಿಹೊಂದುವಂತೆ ನೀವು ನಿಮ್ಮ ಮಶಿನ್ ಅನ್ನು ಬದಲಾಯಿಸಬಹುದು.
ಒಂದು ಅಸಲಿ ಅಟ್ಯಾಚ್ಮೆಂಟ್ ಅನ್ನು ಆರ್ಡ್ರ್ ಮಾಡುವ ಮೂಲಕ ನಿಮಗೆ ಒಂದು ಅಡೆತಡೆಯಿಲ್ಲದ ಪರ್ಫಾರ್ಮೆನ್ಸ್ನ ಭರವಸೆಯನ್ನು ನೀಡಬಹುದು ಹಾಗೂ ಪ್ರತಿ ಅಟ್ಯಾಚ್ಮೆಂಟ್ ಇವುಗಳನ್ನು ನಿಮಗೆ ಒದಗಿಸುತ್ತದೆ:
ಹೂಡಿಕೆಯ ಮೇಲೆ ಗರಿಷ್ಠ ರಿಟರ್ನ್
ಅಟ್ಯಾಚ್ಮೆಂಟ್ಗಳ ರೇಂಜ್ನೊಂದಿಗೆ, ಹೆಚ್ಚಿನ ಬಳಕೆಗೆ ಕಾರಣವಾಗುವ ವಿಭಿನ್ನ ಪ್ರಕಾರಗಳ ಬಳಕೆಗಳನ್ನು ಪೂರೈಸುತ್ತದೆ, ಇದರಿಂದಾಗಿ ನಿಮ್ಮ ಹಣಕ್ಕೆ ಉತ್ತಮ ಮೌಲ್ಯವನ್ನು ನೀಡುತ್ತದೆ ಹಾಗೂ ಹೂಡಿಕೆಯ ಮೇಲೆ ಅಧಿಕ ಆದಾಯವನ್ನು ನೀಡುತ್ತದೆ.
ಅತ್ಯುತ್ತಮ ಕಾರ್ಯಕ್ಷಮತೆಗಾಗಿ ಪರ್ಫೆಕ್ಟ್ ಮ್ಯಾಚ್
ಪ್ರತಿ MCE ಅಟ್ಯಾಚ್ಮೆಂಟ್ ಅನ್ನು ನಮ್ಮ ಇಕ್ವಿಪ್ಮೆಂಟ್ನೊಂದಿಗೆ ಜೋಡಿಸಿದಾಗ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಅಟ್ಯಾಚ್ಮೆಂಟ್ಗಳನ್ನು ನಮ್ಮ ಇಕ್ವಿಪ್ಮೆಂಟ್ನೊಂದಿಗೆ ತನ್ನ ಅತ್ಯುತ್ತಮ ಕಾರ್ಯಕ್ಷಮತೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ.
ವಾರಂಟಿಯೊಂದಿಗೆ ಮನಃಶಾಂತಿ
ಅನುಮೋದಿತ ಅಟ್ಯಾಚ್ಮೆಂಟ್ನ ಫಿಕ್ಸ್ಚರ್ ನಿಮಗೆ ಮನಃಶಾಂತಿಯನ್ನು ನೀಡುತ್ತದೆ, ಮಹಿಂದ್ರಾ ಇಕ್ವಿಪ್ಮೆಂಟ್ ಹಾಗೂ ಅಟ್ಯಾಚ್ಮೆಂಟ್ ಎರಡೂ ಡೀಲರ್ ನೆಟ್ವರ್ಕ್ನಿಂದ ಬೆಂಬಲಿತವಾದ ವಾರಂಟಿಯನ್ನು ಸಂಪೂರ್ಣಾಗಿ ಪುಷ್ಠೀಕರಿಸುತ್ತದೆ.
ಹಾಗೇ, ಹೆಚ್ಚಿನ ಅಪ್ಟೈಮ್ ಅನ್ನು ಖಚಿತಪಡಿಸಲು ಆಫ್ಟ್ರ್ ಸೇಲ್ಸ್ ಸರ್ವಿಸ್ಗಾಗಿ ತರಬೇತಿ ಪಡೆದ ವೃತ್ತಿಪರರು ಲಭ್ಯವಿರುತ್ತಾರೆ.