with you hamesha - 1800 209 6006
with you hamesha - 1800 209 6006 

ಮೆಂಟೆನೆನ್ಸ್‌ ಟಿಪ್ಸ್‌

ಮೆಂಟೆನೆನ್ಸ್‌ ಟಿಪ್ಸ್‌

  1. ಏರ್‌ ಲಾಕ್‌ ಸಮಸ್ಯೆಯನ್ನು ತಡೆಗಟ್ಟಲು ಇಂಧನ ಟ್ಯಾಂಕ್‌ನ ಕ್ಷಮತೆಯ 30%ಗಿಂತ ಹೆಚ್ಚಿನ ಇಂಧನ ಮಟ್ಟವನ್ನು ಯಾವಾಗಲೂ ಕಾಪಾಡಿ.
  2. 2. ಏರ್‌ ಟ್ರ್ಯಾಪ್‌ನ ಕಾರಣದಿಂದ ಎಂಜಿನ್‌ ಆಗಾಗ ಸ್ಥಗಿತಗೊಂಡರೆ, ಫ್ಯೂಯೆಲ್‌ ಫಿಲ್ಟರ್‌ ಅಥವಾ ವಾಟರ್‌ ಸೆಪರೇಟರ್‌ ಚಾಕ್‌ ಆಗಿದೆಯೇ ಅಥವಾ ಸಕ್ಷನ್‌ ಲೈನ್‌ ಸಡಿಲವಾಗಿದೆಯೇ ಎಂದು ಪರಿಶೀಲಿಸಿ. ಫ್ಯೂಯೆಲ್‌ ಸಿಸ್ಟಮ್‌ ಅನ್ನು ಬ್ಲೀಡ್‌ ಮಾಡಿ ಇದರಿಂದ ಏರ್‌ ಬ್ಲಾಕೇಜ್‌ ಸಮಸ್ಯೆ ದೂರವಾಗುತ್ತದೆ.
  3. 3. ಸ್ಟಾರ್ಟರ್‌ ಮೋಟರ್‌ ಅನ್ನು ಸ್ಟಾರ್ಟ್‌ ಮಾಡುವಾಗ 15 ಸೆಕೆಂಡ್‌ಗಳಿಗಿಂತ ಹೆಚ್ಚು ಕ್ರ್ಯಾಂಕ್‌ ಮಾಡಬೇಡಿ. ಸ್ಟಾರ್ಟರ್‌ ಮೋಟರ್‌ಗೆ ಹೆಚ್ಚಿನ ಹಾನಿಯನ್ನು ತಡೆಗಟ್ಟಲು ಪ್ರತಿ ಕ್ರ್ಯಾಂಕಿಂಗ್ ನಡುವೆ ಕನಿಷ್ಠ 10 ಸೆಕೆಂಡ್‌ಗಳ ಅಂತರವನ್ನು ಇರಿಸಿ.
  4. 4. ಟರ್ಬೋ ಚಾರ್ಜರ್‌ನ ಲೈಫ್‌ ಅನ್ನು ಹೆಚ್ಚಿಸಲು ಸ್ಟಾರ್ಟ್‌ ಮಾಡಿದ ತಕ್ಷಣ ವೇಗವನ್ನು ಹೆಚ್ಚಿಸಬೇಡಿ ಹಾಗೂ ಎಂಜಿನ್‌ ಅನ್ನು ನಿಲ್ಲಿಸುವ ಮೊದಲು ಕನಿಷ್ಠ ಪಕ್ಷ 2 ನಿಮಿಷಗಳ ಕಾಲ ಎಂಜಿನ್‌ ಅನ್ನು ನಿಷ್ಕ್ರಿಯವಾಗಿ ಇರಿಸಿ.
  5. 5. ಪ್ರೈಮರಿ ಏರ್‌ ಫಿಲ್ಟರ್ ಅನ್ನು 50 ಗಂಟೆಗಳಲ್ಲಿ ಅಥವಾ ಕ್ಲಸ್ಟರ್‌ನಲ್ಲಿ ಎಚ್ಚರಿಕೆಯು ಕಾಣಿಸಿಕೊಂಡಾಗ ತಪ್ಪದೇ ಸ್ವಚ್ಛಗೊಳಿಸಬೇಕು.
  6. 6. ಏರ್‌ಫಿಲ್ಟರ್‌ ಅನ್ನು ಸ್ವಚ್ಛಗೊಳಿಸುವಾಗ ಯಾವಾಗಲೂ ಗಾಳಿಯನ್ನು ಒಳಗಿನಿಂದ ಹೊರಗೆ ಬೀಸಿ ಹಾಗೂ ಫಿಲ್ಟರ್‌ ಹಾನಿಗೊಳಗಾಗಬಹುದಾದ್ದರಿಂದ ಹಾಗೂ ಎಂಜಿನ್‌ ವೈಫಲ್ಯಕ್ಕೆ ಕಾರಣವಾಗಬಹುದಾದ್ದರಿಂದ ಫಿಲ್ಟರ್‌ ಅನ್ನು ಎಂದಿಗೂ ಟ್ಯಾಪ್‌ ಮಾಡಬೇಡಿ.
  7. 7. ತಯಾರಕರು ಶಿಫಾರಸು ಮಾಡಿದ ಮಧ್ಯಂತರದಲ್ಲಿ ಪ್ರೈಮರಿ ಹಾಗೂ ಸೆಕೆಂಡರಿ ಏರ್‌ ಫಿಲ್ಟರ್‌ ಎರಡನ್ನೂ ಬದಲಾಯಿಸಿ. ಮಹಿಂದ್ರಾ EarthMasterಗೆ ಪ್ರೈಮರಿ ಹಾಗೂ ಸೆಕೆಂಡರಿ ಏರ್‌ ಫಿಲ್ಟರ್‌ಗಳಿಗೆ ಬದಲಾವಣೆಯ ಮಧ್ಯಂತರವು 1000 ಗಂಟೆಗಳಾಗಿರುತ್ತದೆ
  8. 8. ಎಂಜಿನ್‌ ಆಯಿಲ್ ಪ್ರೆಶರ್‌ ಕಡಿಮೆಯಾದರೆ, ಎಂಜಿನ್‌ ಆಯಿಲ್ ಮಟ್ಟವನ್ನು ಹಾಗೂ ಯಾವುದೇ ಬಾಹ್ಯ ಸೋರಿಕೆಗಳನ್ನು ಪರಿಶೀಲಿಸಿ. ಆಯಿಲ್ ಮಟ್ಟ ಕಡಿಮೆಯಿದ್ದರೆ ಆಗ ಆಯಿಲ್‌ ಹಾಕಿ ಹಾಗೂ ಒಂದುವೇಳೆ ಆಯಿಲ್‌ ಮಟ್ಟವು ಹೆಚ್ಚಿದ್ದರೆ ಆಗ ಅದು ಎಂಜಿನ್‌ ಆಯಿಲ್‌ನೊಂದಿಗೆ ಡೀಸಲ್‌ ಮಿಕ್ಸ್‌ ಆಗಿರುವುದನ್ನು ಸೂಚಿಸುತ್ತದೆ. ಸಮಸ್ಯೆ ಇನ್ನೂ ಮುಂದುವರೆದರೆ ಅಧಿಕೃತ ಡೀಲರ್‌ಗೆ ಕಾಲ್‌ ಮಾಡಿ.
  9. 9. ಆಯಿಲ್‌ ಹಾಕಿದ ನಂತರವೂ ಎಂಜಿನ್‌ ಆಯಿಲ್‌ ಇಂಡಿಕೇಟ್‌ ಕಡಿಮೆಯನ್ನು ತೋರಿಸಿದರೆ ಆಗ ದೋಷಪೂರಿತ ಇಲೆಕ್ಟ್ರಿಕಲ್‌ ಕನೆಕ್ಷನ್‌ಗಳು ಅಥವಾ ಎಂಜಿನ್‌ ಆಯಿಲ್‌ ಫಿಲ್ಟರ್‌ ಕ್ಲಾಗಿಂಗ್‌ ಅಥವಾ ಎಂಜಿನ್‌ ಆಯಿಲ್‌ ಕೂಲರ್‌ ಕ್ಲಾಗಿಂಗ್‌ಗಾಗಿ ಪರಿಸೀಲಿಸಿ.
  10. 10. ಎಂಜಿನ್‌ ತಂಪಾಗಿರುವಾಗ ಮಾತ್ರ ಎಂಜಿನ್‌ ಕೂಲೆಂಟ್‌ ಮಟ್ಟವನ್ನು ಪರಿಶೀಲಿಸಿ
  11. 11. ಟ್ರಾನ್ಸ್ ಮಿಷನ್‌ ಆಯಿಲ್‌ ಮಟ್ಟಗಳನ್ನು ಎಂಜಿನ್‌ ಅನ್ನು ಐಡಲ್‌ನಲ್ಲಿ ಚಾಲನೆ ಮಾಡುವ ಮೂಲಕ ಹಾಗೂ ಟ್ರಾನ್ಸ್ ಮಿಷನ್‌ ಆಯಿಲ್‌ ತಂಪಾಗಿರುವಾಗಲೇ ಪರಿಶೀಲಿಸಬೇಕು. ಈ ಸಂದರ್ಭದಲ್ಲಿ ಟ್ರಾನ್ಸ್ ಮಿಷನ್‌ ಆಯಿಲ್‌ ಮಟ್ಟವು ಡಿಪ್‌ಸ್ಟಿಕ್‌ನಲ್ಲಿ ಗುರುತು "MAX" ಹಾಗೂ "MIN"ನಡುವೆ ಬೀಳಬೇಕು.
  12. 12. ಎಂಜಿನ್‌ ಘಟಕಗಳ ಲೈಫ್‌ ಅನ್ನು ಹೆಚ್ಚಿಸಲು ಎಂಜಿನ್‌ ಸರ್ವಿಸ್‌ ಅನ್ನು ಪೂರ್ಣಗೊಳಿಸಿದ ನಂತರ ಸ್ಟಾರ್ಟ್‌ ಮಾಡುವ ಮೊದಲು ಎಂಜಿನ್‌ ಘಟಕಗಳ ಸಾಕಷ್ಟು ಲುಬ್ರಿಕೇಶನ್‌ ಅನ್ನು ಖಚಿತಪಡಿಸುವುದಕ್ಕಾಗಿ 10 ಸೆಕೆಂಡ್‌ಗಳ ಕಾಲ ಎಂಜಿನ್‌ ಅನ್ನು ಯಾವಾಗಲೂ ಡೆಡ್‌ ಕ್ರ್ಯಾಂಕ್‌ ಮಾಡಿ.

‘‘ನಮ್ಮ ಉದ್ಯಮದಲ್ಲಿ ಅತ್ಯುತ್ತಮ ಗ್ರಾಹಕ ಬೆಂಬಲವನ್ನು ನೀಡುವುದು -ಗ್ರಾಹಕರನ್ನು ನಮ್ಮ ಬಿಸಿನೆಸ್‌ನ ಕೇಂದ್ರಭಾಗದಲ್ಲಿ ಇರಿಸುವುದು ನಮ್ಮ ಕಾರ್ಯತಂತ್ರವಾಗಿರುತ್ತದೆ.’’