with you hamesha - 1800 209 6006
with you hamesha - 1800 209 6006 


ಪ್ರೆಸ್‌ ನೋಟ್‌

ಮಹಿಂದ್ರಾ ಹೊಸ BSIV ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್ ರೇಂಜ್‌ ಅನ್ನು ಲಾಂಚ್‌ ಮಾಡಿದೆ

EarthMaster SX Smart50 ನೊಂದಿಗೆ ಕಡಿಮೆ HP BHL ವಿಭಾಗಕ್ಕೆ ಪ್ರವೇಶವನ್ನು ಪ್ರಕಟಿಸುತ್ತದೆ

Mahindra Construction Equipment - PR

ಪುಣೆ, ಜ್ಯೂನ್‌ 14,2021: USD 19.4ಬಿಲಿಯನ್‌ ಮಹಿಂದ್ರಾ ಗ್ರೂಪ್‌ನ ಭಾಗವಾಗಿರುವ, ಮಹಿಂದ್ರಾ ಆ್ಯಂಡ್‌ ಮಹಿಂದ್ರಾ ಲಿಮಿಟೆಡ್‌, ಇಂದು ತನ್ನ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಬಿಸಿನೆಸ್‌ನ ಅಡಿಯಲ್ಲಿ ಹೊಸ BSIV ಕಂಪ್ಲೈಂಟ್‌ ಮೋಟರ್‌ ಗ್ರೇಡರ್‌-ಮಹಿಂದ್ರಾ RoadMaster G9075 ಹಾಗೂ G9595 ಹಾಗೂ ಬ್ಯಾಕ್‌ಹೋ ಲೋಡರ್‌ -. ಮಹಿಂದ್ರಾ EarthMaster SX, VX ನ ಲಾಂಚ್‌ನೊಂದಿಗೆ ತನ್ನ BSIV ಕಂಪ್ಲೈಂಟ್‌ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಅನ್ನು ಪರಿಚಯಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮಹಿಂದ್ರಾ ಟ್ರಕ್‌ ಆ್ಯಂಡ್‌ ಬಸ್‌ ಹಾಗೂ ಕನಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ನ, ಬಿಸಿನೆಸ್‌ ಹೆಡ್‌, ಜಲಜ್‌ ಗುಪ್ತಾ , ‘‘ಕನಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಬಿಸಿನೆಸ್‌ಗಾಗಿ ನಮ್ಮ ಬ್ರ್ಯಾಂಡ್‌ ಉದ್ದೇಶವನ್ನು ಇಟ್ಟುಕೊಂಡು, ನಮ್ಮ ಗ್ರಾಹಕರಿಗಾಗಿ ಸಮೃದ್ಧಿಯ ಗ್ಯಾರಂಟಿಯನ್ನು ನೀಡಲು, ಈಗ ನಾವು ಮಹಿಂದ್ರಾ EarthMaster ಬ್ಯಾಕ್‌ಹೋ ಲೋಡರ್‌ಗಳ ನಮ್ಮ BSIV ರೇಂಜ್‌ ಅನ್ನು ಪರಿಚಯಿಸುತ್ತಿದ್ದೇವೆ. ನಾವು ಒಂದು ಚಾಲೇಂಜರ್‌ ಬ್ರ್ಯಾಂಡ್‌ ಆಗಿದ್ದೇವೆ ಹಾಗೂ ನಮ್ಮ ಗ್ರಾಹಕರಿಗೆ ಹೆಚ್ಚಿನ ವಿಶ್ವಾಸಾರ್ಹತೆ ಹಾಗೂ ಕಡಿಮೆ ಮಾಲಿಕತ್ವ ಹಾಗೂ ನಿರ್ವಹಣಾ ವೆಚ್ಚವನ್ನು ಒದಗಿಸುವ ವರ್ಗದಲ್ಲಿನ ಅತ್ಯುತ್ತಮ ಪರಿಹಾರಗಳನ್ನು ಒದಗಿಸುವ ಮೂಲಕ ,ಅವರ ಉತ್ಪಾದಕತೆ ಹಾಗೂ ಲಾಭದಾಯಕತೆಯನ್ನು ಸುಧಾರಿಸುವುದು ನಮ್ಮ ಗುರಿಯಾಗಿರುತ್ತದೆ’’ ಎಂದು ಹೇಳಿದರು.

ಶ್ರೀ ಗುಪ್ತಾರವರು ಮುಂದಕ್ಕೆ ಮಾತನಾಡುತ್ತಾ, ‘‘ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಉದ್ಯಮಕ್ಕಾಗಿ ಹೊಸ ಎಮಿಷನ್ ಮಾನದಂಡಗಳನ್ನು ಪರಿಚಯಿಸುವುದರೊಂದಿಗೆ ಇಂದು ನಾವು ಮಹಿಂದ್ರಾ ರೋಡ್ ಮಾಸ್ಟರ್ ಮೋಟರ್‌ ಗ್ರೇಡರ್‌ಗಳ ನಮ್ಮ BSIV ಕಂಪ್ಲೈಂಟ್‌ ರೇಂಜ್‌ ಅನ್ನು ಲಾಂಚ್‌ ಮಾಡಲು ಸಂತೋಷಪಡುತ್ತೇವೆ. ಗ್ರಾಹಕರ ಅಗತ್ಯತೆಗಳ ಆಳವಾಗಿ ಆಧ್ಯಯನ ಮಾಡಿದ ಬಳಿಕ ಭಾರತದಲ್ಲಿ ಸದೃಢ ಹಾಗೂ ವಿಶ್ವಾಸಾರ್ಹ ಪ್ರಾಡಕ್ಟ್‌ಗಳನ್ನು ವಿನ್ಯಾಸಗೊಳಿಸಲಾಗಿದೆ ಹಾಗೂ ಅಭಿವೃದ್ಧಿಪಡಿಸಲಾಗಿದೆ, ಇದು ಮಹಿಂದ್ರಾದ ಪ್ರಾಡಕ್ಟ್‌ ಅಭಿವೃದ್ಧಿ ಪ್ರಕ್ರಿಯೆಗಳ ಉತ್ಕೃಷ್ಟತೆಯ ಗುರುತಾಗಿರುತ್ತದೆ’’ ಎಂದು ಹೇಳಿದರು.

ಸಮಗ್ರ MCE BSIV ರೇಂಜ್‌ ಸದೃಢವಾದ iMAXX ಟೆಲಿಮ್ಯಾಟಿಕ್ಸ್‌ ಸೊಲ್ಯೂಷನ್ ಅನ್ನು ಹೊಂದಿದ್ದು ಗ್ರಾಹಕರಿಗೆ ಡೈಗ್ನಾಸ್ಟಿಕ್‌, ಪ್ರೋಗ್ನಾಸ್ಟಿಕ್‌, ಹಾಗೂ ಪ್ರೆಡಿಕ್ಟಿವ್‌ ಫ್ಲೀಟ್‌ ಮ್ಯಾನೇಜ್‌ಮೆಂಟ್‌ನೊಂದಿಗೆ ಇತರ ವರ್ಗದ ಹಲವು ಪ್ರಮುಖ ವೈಶಿಷ್ಟ್ಯತೆಗಳನ್ನು ಒದಗಿಸುತ್ತದೆ. ಉತ್ತಮ ಸೇವೆಗಳನ್ನು ಒದಗಿಸುವ ಕಂಪನಿಯ ನಂಬಿಕೆಗೆ ಅನುಗುಣವಾಗಿ ಉತ್ತಮ ಕಾರ್ಯಕ್ಷಮತೆ, ಉನ್ನತ ಅಪ್‌ಟೈಮ್‌ ಹಾಗೂ ಕಡಿಮೆ ನಿರ್ವಹಣಾ ಹಾಗೂ ಮಾಲಿಕತ್ವದ ವೆಚ್ಚಗಳ ಮೂಲಕ ಹೆಚ್ಚಿನ ಲಾಭದ ನಮ್ಮ ಆಶ್ವಾಸನೆಯನ್ನು ಪುನರುಚ್ಚರಿಸುತ್ತಿದ್ದೇವೆ.

ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ (MCE) ಎಂಬುದು ವಾಸ್ತವವಾಗಿ ಭಾರತೀಯರ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ OEM ಆಗಿದ್ದು ಇದು 2011ರಿಂದ ಭಾರತೀಯ ಗ್ರಾಹಕರ ಅಗತ್ಯತೆಗಳಿಗೆ ಅನುಗುಣವಾಗಿ ಕಸ್ಟಮೈಸ್‌ ಮಾಡಿದ ಮಶಿನ್‌ಗಳನ್ನು ವಿನ್ಯಾಸಗೊಳಿಸುತ್ತದೆ ಹಾಗೂ ತಯಾರಿಸುತ್ತದೆ. MCE ಖಚಿತವಾದ ಅಧಿಕ ಲಾಭಗಳ ಉತ್ತಮ ಗ್ರಾಹಕ ಮೌಲ್ಯದ ಪ್ರತಿಪಾದನೆಯನ್ನು ಒದಗಿಸಲು ಬದ್ಧವಾಗಿದೆ ಹಾಗೂ ಬ್ಯಾಕ್‌ಹೋ ಲೋಡರ್‌ಗಳು, ಅರ್ಥ್ ಮಾಸ್ಟರ್ ಹಾಗೂ ಮೋಟರ್‌ ಗ್ರೇಡರ್‌ಗಳು, ರೋಡ್ ಮಾಸ್ಟರ್[17% ಮಾರುಕಟ್ಟೆ ಪಾಲು] ನ ಒಂದು ಗೆಲುವಿನ ರೇಂಜ್ ಅನ್ನು ಹೊಂದಿದೆ.

ಮಹಿಂದ್ರಾ EarthMaster BSIV & SX Smart50 ಕುರಿತು


BSIV ಅಳವಡಿಸುವುದರಿಂದ ಬ್ಯಾಕ್‌ಹೋ ಲೋಡರ್‌ನ ಸಮಗ್ರ EarthMaster ರೇಂಜ್‌ ಉತ್ಪಾದಕತೆ ಹಾಗೂ ವೈಶಿಷ್ಟ್ಯತೆಗಳೆರಡಲ್ಲೂ ವೃದ್ಧಿಸಿದೆ. ವಿಶ್ವಾಸಾರ್ಹ 74 HP CRi ಮಹಿಂದ್ರಾ ಎಂಜಿನ್‌ನಿಂದ ಚಾಲಿತವಾದ ಇದನ್ನು BSIII ಗೆ ಹೋಲಿಸಿದರೆ, ಮಶಿನ್‌ಗಳ ಲೋಡರ್‌ ದಕ್ಷತೆಗೆ ಕಾರಣವಾಗುವ 13%ಅಧಿಕ ಟಾರ್ಕ್‌ ಅನ್ನು ಹೊಂದಿದೆ. ಸುಧಾರಿತ ಹೈಡ್ರಾಲಿಕ್‌ ಸಿಸ್ಟಮ್‌ ನೊಂದಿಗೆ ಹೆಚ್ಚಿನ ಹರಿವಿನ ನಿರ್ವಹಣೆಯ ಕ್ಷಮತೆಯನ್ನು ಹೊಂದಿರುತ್ತದೆ ಹಾಗೂ ಇತರ ಸುಧಾರಣೆಗಳೂ ಸೇರಿ ಒಟ್ಟಾರೆ 10%ನ ಉತ್ಪಾದನಾ ಸಾಮರ್ಥ್ಯದ ಸುಧಾರಣೆಗೆ ಕಾರಣವಾಗುತ್ತವೆ. ಬನಾನಾ ಬೂಮ್‌, ಜಾಯ್‌ಸ್ಟಿಕ್‌ ಲಿವರ್‌, ಸದೃಢ ವಿನ್ಯಾಸ, ಹಾಗೂ ದೊಡ್ಡದಾದ ಬಕೆಟ್‌ಗಳಂತಹ ಕ್ವಿಂಟೇನಿಯಲ್‌ ಹಾಗೂ ವಿಶಿಷ್ಟ ವೈಶಿಷ್ಟ್ಯತೆಗಳೊಂದಿಗೆ EarthMaster ರೇಂಜ್‌ ಗಣಿಗಾರಿಕೆ, ಕಾಲುವೆ, ಕ್ರಶರ್‌ಗಳು, ಕಟ್ಟಡ ನಿರ್ಮಾಣ ಅಥವಾ ನಿರ್ಮಾಣ ಉದ್ಯಮದ ಯಾವುದೇ ಇತರ ಕೆಲಸಗಳಿಗೆ ಎಲ್ಲಾ ರೀತಿಗಳ ಬ್ಯಾಕ್‌ಹೋ ಬಳಕೆಗಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಇದು ಎರಡು ವೇರಿಯೆಂಟ್‌ಗಳಲ್ಲಿ ಅಂದರೆ SX & VX ಗಳಲ್ಲಿ ಲಭ್ಯವಿರುತ್ತದೆ.

SX Smart50 ಒಂದು ಹೊಸ, ಕಡಿಮೆ ರೇಂಜ್ HP ವರ್ಗದ ಪ್ರಾಡಕ್ಟ್‌ ಆಗಿದ್ದು ಇದು ಬಾಡಿಗೆದಾರರ ಸೆಗ್ಮೆಂಟ್‌ಗಾಗಿ ಅತ್ಯುತ್ತಮ ಪರಿಹಾರವಾಗಿರುತ್ತದೆ. ಈ ಪ್ರಾಡಕ್ಟ್‌ ಅನ್ನು ದೃಢಪಡಿಸಿದ ಮಹಿಂದ್ರಾ50HP Ditech BSIII ಎಂಜಿನ್‌ ಹಾಗೂ 74HPಗೆಸಮಾನವಾದ ಬ್ಯಾಕ್‌ಹೋ ಉತ್ಪಾದಕತೆಯನ್ನು ಒದಗಿಸಲು ಅನುಕೂಲಕರ ಹೈಡ್ರಾಲಿಕ್ಸ್‌ನೊಂದಿಗೆ ರಚಿಸಲಾಗಿದೆ. SX Smart50 ಹೆಚ್ಚು ಸ್ಪರ್ಧಾತ್ಮಕ ಹಾಗೂ ಕಡಿಮೆ ಮಾರ್ಜಿನ್‌ ಸೆಗ್ಮೆಂಟ್‌ನಲ್ಲಿ ಆಲೋಚಿಸಿ ಖರ್ಚುಮಾಡುವ ಗ್ರಾಹಕರ ಅವಶ್ಯಕತೆಗಳನ್ನು ಪೂರೈಸುತ್ತದೆ.

ಹೊಸ EarthMaster ಅನ್ನು ರೇಂಜ್‌ ಎರ್ಗೊನಾಮಿಕ್‌ ರೀತಿಯಲ್ಲಿ ವಿನ್ಯಾಸ ಗೊಳಿಸಲಾಗಿದ್ದು ಆಪರೇಟರ್‌ ಆರಾಮದಾಯಕತೆಗೆ ಮೊದಲ ಆದ್ಯತೆ ನೀಡಲಾಗಿದೆ. ಟಿಂಟೆಡ್‌ ಗ್ಲಾಸ್‌, ಕೋಟ್‌ ಹ್ಯಾಂಗರ್‌, ಮೊಬೈಲ್‌ ಹಾಗೂ ವಾಟರ್‌ ಬಾಟಲ್‌ ಹೋಲ್ಡರ್‌ ಜೊತೆಗೆ ಸುಧಾರಿತ ವೈಶಿಷ್ಟ್ಯತೆಯಿಂದ ಪ್ಯಾಕ್‌ ಮಾಡಲಾಗಿರುವ ಕ್ಯಾಬಿನ್‌ ನಮ್ಮ ಆಪರೇಟರ್‌ಗಳಿಗೆ ಆರಾಮದಾಯಕ ಹಾಗೂ ಸುರಕ್ಷಿತವಾಗಿರುತ್ತದೆ. ನಮ್ಮ ಗ್ರಾಹಕರಿಗೆ ಹೆಚ್ಚು ಲಾಭ ಹಾಗೂ ಹಾಗೂ ಸ್ವತ್ತನ್ನು ಒದಗಿಸುವ ಉದ್ದೇಶದೊಂದಿಗೆ, EarthMaster ರೇಂಜ್‌ ಅನ್ನು ಸಂಬಂಧಿಸಿದ ವರ್ಗದಲ್ಲಿ ಉದ್ಯಮದಲ್ಲಿನ ಅತ್ಯಂತ ಕಡಿಮೆ ನಿರ್ವಹಣಾ ವೆಚ್ಚವನ್ನು ಒದಗಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಮಹಿಂದ್ರಾ RoadMaster BSIV ಕುರಿತು


ಹೊಸ BSIV RoadMaster ರೇಂಜ್‌ ಹಲವು ವಿಚಾರಗಳಿಗೆ ಅತ್ಯುತ್ತಮವಾದ ಪರಿಹಾರವನ್ನು ನೀಡುತ್ತದೆ ಹಾಗೂ ಸ್ಮಾರ್ಟ್‌ ಸಿಟಿ, ಭಾರತ್‌ಮಾಲಾ, ಮೊದಲಾದ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಿಗೆ ಹಾಗೂ ಪ್ರಮುಖ ಜಿಲ್ಲಾ ರಸ್ತೆಗಳು, ರಾಜ್ಯ ಹೆದ್ದಾರಿಗಳು, ಗಡಿ ರಸ್ತೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಗಾಗಿ ರೋಡ್‌ ಕಾಂಟ್ರ್ಯಾಕ್ಟರ್‌ಗಳ ಗ್ರೇಡಿಂಗ್‌ ಅಗತ್ಯತೆಗಳನ್ನು ಕರಾರುವಕ್ಕಾಗಿ ಪೂರೆಸುತ್ತದೆ.

G9075 74HP CRI ಎಂಜಿನ್‌ ನಿಂದ ಚಾಲಿತವಾಗಿದೆ ಹಾಗೂ 350 NM ವರೆಗೆ ಟಾರ್ಕ್‌ ಅನ್ನು ಹೆಚ್ಚಿಸಲಾಗಿರುವ ಇದು ರಾಜ್ಯ ಹೆದ್ದಾರಿಗಳು, ಗ್ರಾಮೀಣ ರಸ್ತೆಗಳು, ಜಿಲ್ಲಾ ರಸ್ತೆಗಳು, ಹಾಗೂ PMGSY ಅಡಿಯ ಇತರ ಪ್ರಾಜೆಕ್ಟ್‌ಗಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಈ ಮೋಟರ್‌ ಗ್ರೇಡರ್‌ಗಳನ್ನು 3 ಮೀ. [10 ಅಡಿ] ಅಗಲ ಬ್ಲೇಡ್‌ನೊಂದಿಗೆ ಜೋಡಿಸಲಾಗಿದೆ ಹಾಗೂ ಸಾಂಪ್ರದಾಯಿಕ ಮೋಟಾರ್‌ ಗ್ರೇಡರ್‌ಗಳಿಗೆ ಹೋಲಿಸಿದರೆ 40% ಕಡಿಮೆ ವೆಚ್ಚದಲ್ಲಿ ಯಾವುದೇ ಸಮಸ್ಯೆಯಿಲ್ಲದೇ ಗ್ರೇಡಿಂಗ್‌ ಅನ್ನು ನೀಡಲು ಅನುಕೂಲವಾಗುವಂತೆ ತಯಾರಿಸಲಾಗಿದೆ.

G9595 95 HP CRi ಎಂಜಿನ್‌ ನಿಂದ ಚಾಲಿತವಾಗಿರುತ್ತದೆ ಹಾಗೂ 400 NMವೆರೆಗೆ ಹೆಚ್ಚಿಸಿದ ಟಾರ್ಕ್‌ ರಾಷ್ಟ್ರೀಯ ಹೆದ್ದಾರಿ ಹಾಗೂ ಅವುಗಳ ವಿಸ್ತರಣಾ ಪ್ರಕ್ರಿಯೆಗಳು, ರೇಲ್‌ ಕಾರಿಡಾರ್‌ ಹಾಗೂ ಇಂಡಸ್ಟ್ರಿಯಲ್‌ ಪ್ಲಾಟ್‌ ಲೆವಲಿಂಗ್‌ಗಾಗಿ ಸೂಕ್ತವಾಗಿದೆ. ಆಪರೇಟರ್‌ ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು, G9595 ಎರ್ಗೊನಾಮಿಕ್‌ ರೀತಿಯಲ್ಲಿ ವಿನ್ಯಾಸಗೊಳಿಸಲಾದ ಏರ್‌-ಕಂಡೀಷನ್ಡ್‌ ಕ್ಯಾಬಿನ್‌ನೊಂದಿಗೆ ಬರುತ್ತದೆ. ಇದು ಆಪರೇಟರ್‌ಗಳಿಗೆ ಆಯಾಸ ರಹಿತ ಆಪರೇಟಿಂಗ್‌ ಅನುಭವವನ್ನು ನೀಡುತ್ತದೆ ಹಾಗೂ ಒಟ್ಟಾರೆ ಉತ್ಪಾದಕತೆಯನ್ನು ಸುಧಾರಿಸಲು ಅವರಿಗೆ ಸಹಾಯ ಮಾಡುತ್ತದೆ.

RoadMaster ರೇಂಜ್‌ ದೊಡ್ಡ ಕಾಂಟ್ಯ್ರಾಕ್ಟರ್‌ಗಳ ಪ್ರಾಡಕ್ಟ್‌ ಪೋರ್ಟ್‌ಫೋಲಿಯೋವನ್ನು ಹೆಚ್ಚಿಸುತ್ತದೆ ಹಾಗೂ ಮಧ್ಯಮ ರಸ್ತೆಗಳು, ರಾಜ್ಯ ಹೆದ್ದಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲು ಹೆಚ್ಚು ಅನುಕೂಲಕರವಾಗಿರುತ್ತವೆ. ರೇಲ್ವೆ ಟ್ರ್ಯಾಕ್‌ಗಳನ್ನು ಹಾಕಲು ಹಾಗೂ ಇಂಡಸ್ಟ್ರಿಯಲ್‌ ಕನ್‌ಸ್ಟ್ರಕ್ಷನ್‌ ಹಾಗೂ ಬಂದರುಗಳಿಗಾಗಿ ದೊಡ್ಡ ಪ್ಲಾಟ್‌ಗಳನ್ನು ಲೆವಲಿಂಗ್‌ ಮಾಡಲು, ಒಡ್ಡು ಅಥವಾ ಮಣ್ಣಿನ ಕೆಲಸದ ಬಳಕೆಗಳಿಗೆ ಸೂಕ್ತವಾಗಿವೆ.

iMAXX ಕುರಿತು


ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ನಿರ್ಮಾಣ ಉಪಕರಣದ ಉದ್ಯಮದಲ್ಲಿ ತನ್ನ ಗ್ರಾಹಕರಿಗೆ ಟೆಲಿಮ್ಯಾಟಿಕ್ಸ್‌ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಪ್ರವರ್ತಕವಾಗಿದೆ. ‘’ಪರಂಪರೆಯನ್ನು ಮುಂದುವರೆಸುತ್ತಾ, iMAXX ಟೆಲಿಮ್ಯಾಟಿಕ್‌ ಟೆಕ್ನಾಲಾಜಿ - EarthMaster ಹಾಗೂ RoadMasterನ ನಮ್ಮ ಸಮಗ್ರ ಶ್ರೇಣಿಯಲ್ಲಿ ಪೂರ್ವಸೂಚಕ, ವಿಶ್ಲೇಷಣೆ ಹಾಗೂ ಮುನ್ಸೂಚಕ [ಡೈಗ್ನಾಸ್ಟಿಕ್‌, ಪ್ರೋಗ್ನಾಸ್ಟಿಕ್‌, ಹಾಗೂ ಪ್ರೆಡಿಕ್ಟಿವ್‌ ]ಫ್ಲೀಟ್‌ ನಿರ್ವಹಣಾ ವ್ಯವಸ್ಥೆಯನ್ನು ಪರಿಚಯಿಸಲು ನಾವು ಸಂತೋಷ ಪಡುತ್ತೇವೆ. ನಿಮ್ಮ ಉಪಕರಣ ಹಾಗೂ ನಿಮ್ಮ ಬಿಸಿನೆಸ್‌ ಬಗ್ಗೆ ಪ್ರಮುಖ ಮಾಹಿತಿಯೊಂದಿಗೆ ನಿಮ್ಮನ್ನು ಅಪ್‌ಡೇಟ್ ಮಾಡುವ ವೈಯಕ್ತಿಕ ಸಹಾಯಕ ಎಂದು ನೀವು ಇದನ್ನು ಪರಿಗಣಿಸಬಹುದು. iMAXX ಅನ್ನು ಈಗಾಗಲೇ ನಮ್ಮ ಟ್ರಕ್‌ ಬಿಸಿನೆಸ್‌ನಲ್ಲಿ ಪರಿಹಾರಗಳ ಮೇಲ್ವಿಚಾರಣೆಗಾಗಿ ಬಳಸಲಾಗಿದೆ ಮತ್ತು ಪರೀಕ್ಷಿಸಲಾಗಿದೆ. ಇದು ಗ್ರಾಹಕರಿಗೆ ಹಲವು ವಿಧದಲ್ಲಿ ಪ್ರಯೋಜನವನ್ನು ನೀಡಿದೆ. ಪರಿಣಾಮಕಾರಿ ಮಶಿನ್‌ನೊಂದಿಗೆ ಯಾವುದೇ ಪ್ರಮುಖ ಬ್ರೇಕ್‌ ಡೌನ್‌ ಅನ್ನು ತಪ್ಪಿಸಲು ತಡೆಗಟ್ಟುವ ನಿರ್ವಹಣಾ ಪ್ರಚೋದಕಗಳ ಬಗ್ಗೆ ಎಚ್ಚರಿಕೆಯನ್ನು ನೀಡುತ್ತದೆ.

ಈ ಪ್ರಾಡಕ್ಟ್‌ಗಳು ಒಂದು ವರ್ಷದ, ಅನಿಯಮಿತ ಗಂಟೆಗಳ ವಾರಂಟಿಯೊಂದಿಗೆ ಬರುತ್ತದೆ, ಇದು ದುಬಾರಿ ರಿಪೇರಿಗಳಿಗೆ ಗ್ರಾಹಕರು ಆತಂಕ ಪಡುವುದನ್ನು ತಪ್ಪಿಸುತ್ತದೆ. ಇದು ಕಠಿಣ ಪರೀಕ್ಷೆ ಹಾಗೂ ಅತ್ಯುತ್ತಮ ಭಾಗಗಳ ಸೋರ್ಸಿಂಗ್‌ ಹಾಗೂ ಮಶಿನ್‌ ವಿನ್ಯಾಸದ ಸರಳತೆಯಿಂದ ಬೆಂಬಲಿತವಾದ, ಮಹಿಂದ್ರಾದವರ ಎಂಜಿನಿಯರಿಂಗ್‌ ಹಾಗೂ ಮ್ಯಾನ್ಯೂಫ್ಯಾಕ್ಚರಿಂಗ್‌ ಕ್ಷಮತೆಯ ಕಾರಣದಿಂದ ಸಾಧ್ಯವಾಗಿದೆ.

ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಒರಟು [ಉಬ್ಬು-ತಗ್ಗು] ಭೂಪ್ರದೇಶಗಳಲ್ಲಿ ಹಾಗೂ ಕಷ್ಟಕರವಾದ ಬಳಕೆಗಳಿಗಾಗಿ ಕಠಿಣ ಪರಿಕ್ಷೆಗೆ ಒಳಗಾಗಿದೆ. ಇದನ್ನು ಎಲ್ಲಾ ರೀತಿಯ ಕಾರ್ಯಕ್ಷಮತೆ, ಸುರಕ್ಷತೆ ಹಾಗೂ ವಿಶ್ವಾಸಾರ್ಹತೆಯ ಮಾನದಂಡಗಳ ಮೇಲೆ ಮೌಲ್ಯೀಕರಿಸಲಾಗಿದೆ ಹಾಗೂ ವಿಶ್ವದಾದ್ಯಂತ ಸಾಟಿಯಿಲ್ಲದ ವ್ಯಾಪ್ತಿಯನ್ನು ಹೊಂದಿರುವ ಮಹಿಂದ್ರಾದ 50ಕ್ಕೂ ಹೆಚ್ಚಿನ ಡೀಲರ್‌ ಸೇಲ್ಸ್‌ ಹಾಗೂ ಸರ್ವಿಸ್‌ ನೆಟ್‌ವರ್ಕ್‌ನಿಂದ ಬೆಂಬಲಿತವಾಗಿದೆ. ಇದು ಸೂಕ್ತವಾದ ಟೆಕ್ನಾಲಾಜಿಯಿಂದ ಸಿದ್ದಗೊಂಡಿದ್ದು, ಸಾಟಿಯಿಲ್ಲದ ಗುಣಮಟ್ಟ, ಅದ್ಭುತ ಸ್ಟೈಲ್‌, ಆಪರೇಟರ್‌ ಸೌಕರ್ಯ ಹಾಗೂ ಇದರ ಆವಿಷ್ಕಾರಿ ಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿ - IMAXXನೊಂದಿಗೆ ಸಂಯೋಜಿಸಲ್ಪಟ್ಟಿದೆ.

ಪುಣೆಯ ಚಕನ್‌ನಲ್ಲಿರುವ ಮಹಿಂದ್ರಾದ ಅತ್ಯಾಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಅನ್ನು ತಯಾರಿಸಲಾಗುತ್ತಿದೆ. ಭಾರತದ ಒರಟು ಭೂಪ್ರದೇಶ ಹಾಗೂ ಭಾರಿ ಬಳಕೆಯನ್ನು ತಡೆದುಕೊಳ್ಳಲು ನಿರ್ಮಿಸಲಾದ ಈ ಪ್ರಾಡಕ್ಟ್‌ ಅನ್ನು ಅಭಿವೃದ್ಧಿಪಡಿಸಲು ಮಹಿಂದ್ರಾದ ಪ್ರಾಡಕ್ಟ್‌ ಡೆವಲಪ್‌ಮೆಂಟ್‌ ಟೀಮ್‌ ಗ್ರಾಹಕರ ಅಭಿಪ್ರಾಯ ಹಾಗೂ ಪ್ರತಿಕ್ರಿಯೆಯನ್ನು ಬಳಸಿಕೊಂಡಿದೆ. ಇದಲ್ಲದೇ ಆಧುನಿಕ ವೆಹಿಕಲ್‌ ಸಿಸ್ಟಮ್‌ಗಳು ಹಾಗೂ ಟೆಕ್ನಾಲಾಜಿಗಳನ್ನು ಬಳಸಿಕೊಂಡು ಎಲ್ಲಾ ಉಚಿತ ವೈಶಿಷ್ಯಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡುತ್ತದೆ.

ನಮ್ಮ ಸೋಶಿಯಲ್‌ ಮೀಡಿಯಾ ಚ್ಯಾನೆಲ್‌ಗಳು :

ಫೇಸ್‌ಬುಕ್‌ - https://www.facebook.com/MahindraCE
ಟ್ವಿಟರ್‌ - https://twitter.com/Mahindra_CE
ಯೂಟ್ಯೂಬ್‌ - https://www.youtube.com/channel/UCRsspxEKEwWvnLZ4BfX6WpA
ಲಿಂಕ್ಡ್ಇನ್‌ - https://in.linkedin.com/company/mahindraconstructionequipment
ಇನ್ಸ್ಟಾಗ್ರಾಂ - https://www.instagram.com/mahindraconstructionequipment/

ಮಹಿಂದ್ರಾದ ಕುರಿತು


ಮಹಿಂದ್ರಾ ಗ್ರೂಪ್‌ USD 19 ಬಿಲಿಯನ್‌ ಕಂಪನಿಗಳ ಒಕ್ಕೂಟವಾಗಿದ್ದು, ಅವಿಷ್ಕಾರಿ ಮೊಬಿಲಿಟಿ ಸೊಲ್ಯೂಷನ್ ಗಳ ಮೂಲಕ ಜನರ ಏಳಿಗೆಗೆ ಶ್ರಮಿಸಲು, ಗ್ರಾಮೀಣ ಪ್ರದೇಶಗಳ ಸಮೃದ್ಧಿಯನ್ನು ಬಲಿಷ್ಠಗೊಳಿಸಲು, ನಗರ ಜೀವನವನ್ನು ವರ್ಧಿಸಲು, ಹೊಸ ಬಿಸಿನೆಸ್‌ ಅನ್ನು ಅಭಿವೃದ್ಧಿಪಡಿಸಲು ಹಾಗೂ ಸಮುದಾಯಗಳನ್ನು ಪೋಷಿಸಲು ಅವಕಾಶ ಮಾಡಿಕೊಡುತ್ತದೆ. ಇದು ಭಾರತದಲ್ಲಿ ಯುಟಿಲಿಟಿ ವಾಹನಗಳು,ಇನ್‌ಫಾರ್ಮೇಷನ್‌ ಟೆಕ್ನಾಲಾಜಿ, ಫೈನಾನ್ಶಿಯಲ್‌ ಸೇವೆಗಳು ಹಾಗೂ ವೆಕೆಶನ್‌ ಓನರ್‌ಶಿಪ್‌ನಲ್ಲಿ ಲೀಡರ್‌ಶಿಪ್‌ ಪಾತ್ರವನ್ನು ನಿರ್ವಹಿಸುತ್ತಿದೆ ಹಾಗೂ ಪರಿಮಾಣದ ಪ್ರಕಾರ ವಿಶ್ವದ ಅತಿದೊಡ್ಡ ಟ್ರ್ಯಾಕ್ಟರ್‌ ಕಂಪನಿಯಾಗಿರುತ್ತದೆ. ಇದು ನವೀಕರಿಸಬಹುದಾದ ಎನರ್ಜಿ, ಕೃಷಿವ್ಯವಸಾಯ, ಲಾಜಿಸ್ಟಿಕ್‌ಗಳು, ರಿಯಲ್‌ ಎಸ್ಟೇಟ್‌ ಡೆವಲಪ್‌ಮೆಂಟ್‌ನಲ್ಲಿ ಪ್ರಬಲವಾದ ವಿಭಾಗಗಳನ್ನು ಒಳಗೊಂಡಿದೆ. ಭಾರತದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮಹಿಂದ್ರಾ 100 ದೇಶಗಳಾದ್ಯಂತ 2,56,000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ.
ಮಹಿಂದ್ರಾದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ www.mahindra.com / Twitter and Facebook: @MahindraRise

ಮಾಧ್ಯಮ ಸಂಪರ್ಕ ಮಾಹಿತಿ


ಶ್ರೀಮತಿ ವರ್ಷಾ ಚೈನಾನಿ
ಸೀನಿಯರ್‌ ವೈಸ್‌ ಪ್ರೆಸಿಡೆಂಟ್‌ ಗ್ರೂಪ್‌ ಕಮ್ಯುನಿಕೇಶನ್‌
ಮಹಿಂದ್ರಾ ಆ್ಯಂಡ್ ಮಹಿಂದ್ರಾ ಲಿ.
ಮೊಬೈಲ್‌ : +91 9987340055
ಇಮೇಲ್‌– [email protected]

ಪ್ರಾಡಕ್ಟ್‌ /ಮಾರ್ಕೆಟಿಂಗ್‌ ಸಂಬಂಧಿತ ಪ್ರಶ್ನೆಗಳಿಗಾಗಿ ದಯವಿಟ್ಟು ಸಂಪರ್ಕಿಸಿ :


ರಾಜೀವ್‌ ಮಲಿಕ್
ವೈಸ್‌ ಪ್ರೆಸಿಡೆಂಟ್‌ ಹಾಗೂ ಹೆಡ್‌ ಮಾರ್ಕೆಟಿಂಗ್‌
ಟ್ರಕ್‌ ಆ್ಯಂಡ್‌ ಬಸ್‌ ಹಾಗೂ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌
ಮಹಿಂದ್ರಾ ಆ್ಯಂಡ್‌ ಮಹಿಂದ್ರಾ ಲಿ.
ಮೊಬೈಲ್‌ : +91 9594968899
ಇಮೇಲ್‌ ವಿಳಾಸ – [email protected]

ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ನ ಮಹಿಂದ್ರಾ RoadMaster G90 CIA ವರ್ಲ್ಡ್‌ ಕನ್‌ಸ್ಟ್ರಕ್ಷನ್‌ ಅವಾರ್ಡ್ಸ್‌ 2019 ರಲ್ಲಿ ಪುರಸ್ಕಾರವನ್ನು ಗೆದ್ದಿದೆ

ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ನ ಮಹಿಂದ್ರಾ RoadMaster G90 CIA ವರ್ಲ್ಡ್‌ ಕನ್‌ಸ್ಟ್ರಕ್ಷನ್‌ ಅವಾರ್ಡ್ಸ್‌ 2019 ರಲ್ಲಿ ಪುರಸ್ಕಾರವನ್ನು ಗೆದ್ದಿದೆ

CIA World Construction Award 2019

ಮುಂಬಯಿ, ಫೆಬ್ರುವರಿ 26, 2019 : US$ 17.8 ಬಿಲಿಯನ್‌ ಮಹಿಂದ್ರಾ ಗ್ರೂಪ್‌ನ ಭಾಗವಾದ, ಮಹಿಂದ್ರಾ ಆ್ಯಂಡ್‌ ಮಹಿಂದ್ರಾ ಲಿಮಿಟೆಡ್‌ (M&M Ltd), ಅದರ ಹೊಸ ಮೋಟರ್‌ ಗ್ರೇಡರ್‌ ಮಹಿಂದ್ರಾ RoadMaster G90 ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಬಿಸಿನೆಸ್‌ನಿಂದ CIA ವರ್ಲ್ಡ್‌ ಕನ್‌ಸ್ಟ್ರಕ್ಷನ್‌ ಅವಾರ್ಡ್ಸ್‌ 2019ರಲ್ಲಿ ಇನೋವೇಟಿವ್‌ ಪ್ರಾಡಕ್ಟ್‌ ಆಫ್‌ದ ಇಯರ್‌ ವರ್ಗದಲ್ಲಿ ಪ್ರಶಸ್ತಿಯನ್ನು ಗೆದ್ದಿದೆ ಎಂದು ಇತ್ತೀಚೆಗೆ ಘೋಷಿಸಿದೆ.

ಇತ್ತೀಚೆಗೆ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ, DGM ಪ್ರಾಡಕ್ಟ್‌ ಪ್ಲ್ಯಾನಿಂಗ್‌ ಆ್ಯಂಡ್‌ ಮಾರ್ಕೆಟಿಂಗ್‌ನ ಶ್ರೀ ರಾಹುಲ್‌ ಜೋಶಿ ಹಾಗೂ M&M ಲಿಮಿಟೆಡ್‌ನ ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ನ ಸೀನಿಯರ್‌ ಮ್ಯಾನೇಜರ್‌ -ಮಾರ್ಕೆಟಿಂಗ್‌ ಶ್ರೀ. ರುಚಿರ್‌ ಅಗರ್‌ವಾಲ್‌ ಅವರು ಪ್ರಶಸ್ತಿ ಸ್ವೀಕರಿಸಿದರು.

ಈ ವಾರ್ಷಿಕ ಅವಾರ್ಡ್‌ ಭಾರತೀಯ ನಿರ್ಮಾಣ ಕ್ಷೇತ್ರದಲ್ಲಿ ಅತ್ಯಂತ ವಿಶಿಷ್ಟವಾದ ಸಾಧಕರಿಗೆ ನೀಡುವ ಕಾಣಿಕೆಯಾಗಿದೆ. ಈ ಪ್ರಶಸ್ತಿಯನ್ನು ನವೀನ ಪ್ರಾಡಕ್ಟ್‌ಗಳ ಮೂಲಕ ರೋಡ್‌ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಕ್ಷೇತ್ರದಲ್ಲಿ ಕ್ರಾಂತಿಕಾರಿ ಪರಿವರ್ತನೆಯನ್ನು ತರುವಲ್ಲಿ ಮಹಿಂದ್ರಾದ ಪಾತ್ರವನ್ನು ಸರಿಯಾಗಿ ಗುರುತಿಸಿ ನೀಡಲಾಗಿದೆ. ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಭಾರತ ಹಾಗೂ ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸಂಬಂಧಿಸಿದ ವಿಶಿಷ್ಟ ಪ್ರಾಡಕ್ಟ್‌ಗಳನ್ನು ತರುವ ನಿಟ್ಟಿನಲ್ಲಿ ತನ್ನ ನಿರಂತರ ಪ್ರಯತ್ನಗಳಿಗೆ ಹೆಸರುವಾಸಿಯಾಗಿದೆ.

ಮೋಟರ್‌ ಗ್ರೇಡರ್‌ಗಳ RoadMaster ರೇಂಜ್‌ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ನಾವಿನ್ಯತೆಯಿಂದ ಪರಿಸರ ಸ್ನೇಹಿ ಪ್ರಾಡಕ್ಟ್‌ವರೆಗೆ 5 ಉದ್ಯಮ ಶೀರ್ಷಿಕೆಗಳನ್ನು ಗೆಲ್ಲುವ ಮೂಲಕ ತನ್ನದೇ ಆದ ದಾಖಲೆಯನ್ನು ಸೃಷ್ಟಿಸಿದೆ. ಉದ್ಯಮದ ಮನ್ನಣೆಯಲ್ಲದೇ ಇದು ರೈಜ್‌ ಆವಾರ್ಡ್ಸ್‌ ಹಾಗೂ MD ಟಾಪ್‌ 10 ಸೇರಿದಂತೆ 2 ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಪಡೆಯಿತು.

CIA ವರ್ಲ್ಡ್‌ ಕನ್‌ಸ್ಟ್ರಕ್ಷನ್‌ ಆವಾರ್ಡ್ಸ್‌ನ ಕುರಿತು


ಎಪಿಕ್‌ ಮೀಡಿಯಾದಿಂದ 2011ರಲ್ಲಿ ಆರಂಭಿಸಲಾದ, ಕನ್‌ಸ್ಟ್ರಕ್ಷನ್‌ ಇನ್‌ಫ್ರಾಸ್ಟ್ರಚ್ಚರ್ ಆರ್ಕಿಟೆಕ್ಟ್‌ ವರ್ಲ್ಡ್‌ ಮ್ಯಾಗ್‌ಜೀನ್‌ ಅನ್ನು CIA ವರ್ಲ್ಡ್‌ ಎಂದು ಕರೆಯಲಾಗುತ್ತದೆ. ಇದು ಕನ್‌ಸ್ಟ್ರಕ್ಷನ್‌, ಇನ್‌ಫ್ರಾಸ್ಟ್ರಚ್ಚರ್ ಹಾಗೂ ಆರ್ಕಿಟೆಕ್ಚರ್‌ ಈ ಮೂರು ಕ್ಷೇತ್ರಗಳತ್ತ ಗಮನ ಹರಿಸುವ ಏಕೈಕ ಭಾರತೀಯ ನಿಯತಕಾಲಿಕವಾಗಿದೆ. CIA ವರ್ಲ್ಡ್‌ ಕನ್‌ಸ್ಟ್ರಕ್ಷನ್‌ ಅವಾರ್ಡ್ಸ್‌ನ ಉದ್ದೇಶವು ಕನ್‌ಸ್ಟ್ರಕ್ಷನ್‌ ಸೆಕ್ಟರ್‌ಗಳ ಬಿಲ್ಡರ್‌ಗಳು, ಆರ್ಕಿಟೆಕ್ಚರ್‌ಗಳು, ಕಾಂಟ್ರ್ಯಾಕ್ಟರ್‌ಗಳು ಹಾಗೂ ಕನ್ಸಲ್ಟೆಂಟ್‌ಗಳನ್ನು ಗುರುತಿಸುವುದು, ಪ್ರೋತ್ಸಾಹಿಸುವುದು ಹಾಗೂ ಪ್ರೇರೇಪಿಸುವುದು ಮಾತ್ರವಲ್ಲದೇ ಇತರರ ನಡುವೆ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌, ಕನ್‌ಸ್ಟ್ರಕ್ಷನ್‌ ಕೆಮಿಕಲ್ಸ್‌, ಪೇಂಟ್ಸ್‌ ಹಾಗೂ ಕೋಟಿಂಗ್ಸ್‌, ಕನ್‌ಸ್ಟ್ರಕ್ಷನ್‌ ಟೆಕ್ನಾಲಾಜಿಗೆ ಸಂಬಂಧಿತ ಸೆಕ್ಟರ್‌ಗಳನ್ನು ಗೌರವಿಸುವುದಾಗಿರುತ್ತದೆ. ಇದು ಈ ಪ್ರಶಸ್ತಿಯ 5ನೆಯ ಆವೃತ್ತಿಯಾಗಿತ್ತು.

ಮಹಿಂದ್ರಾ RoadMaster G90ಯ ಕುರಿತು


G90 ರೋಡ್‌ ಕಾಂಟ್ರ್ಯಾಕ್ಟರ್‌ಗಳಿಗೆ ಅನೇಕ ಪ್ರಯೋಜನಗಳನ್ನುನೀಡುತ್ತದೆ ಹಾಗೂ ಸಮಗ್ರ ರೋಡ್‌ ಹಾಗೂ ರೇಲ್ವೆ ಕಾಂಟ್ರ್ಯಾಕ್ಟರ್‌ ಬಾಂಧವರಿಗಾಗಿ ಸ್ಪ್ರೇಡಿಂಗ್‌ ಹಾಗೂ ಗ್ರೇಡಿಂಗ್‌ ಗಳಿಗೆ ಸೂಕ್ತವಾದ ಮಶಿನ್‌ ಆಗಿರುತ್ತದೆ. ಇದು ಒಂದು ಅನುಕೂಲಕರ ಪರಿಹಾರವನ್ನು ನೀಡುತ್ತದೆ. ಸ್ಮಾರ್ಟ್‌ ಸಿಟಿ, ಹಾಗೂ ಪ್ರಮುಖ ಜಿಲ್ಲಾ ರಸ್ತೆಗಳು, ರಾಜ್ಯ ಹೆದ್ದಾರಿಗಳು, ಗಡಿ ರಸ್ತೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆಯಂತಹ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಿಗಾಗಿ ರೋಡ್‌ ಕಾಂಟ್ರ್ಯಾಕ್ಟರ್‌ಗಳ ಗ್ರೇಡಿಂಗ್‌ ಅಗತ್ಯತೆಗಳನ್ನು ಪೂರೈಸುತ್ತದೆ.

G90 ಮಹಿಂದ್ರಾದಿಂದ ಅಭಿವೃದ್ಧಿಪಡಿಸಲಾದ 91 HP DiTECಎಂಜಿನ್ನಿಂದ ಚಾಲಿತವಾಗಿದ್ದು ಇದನ್ನು 3ಮೀಟರ್‌ [10 ಅಡಿ] ಅಗಲದ ಬ್ಲೇಡ್‌ನೊಂದಿಗೆ ಜೋಡಿಸಲಾಗಿದೆ. ಈ ಇಕ್ವಿಪ್‌ಮೆಂಟ್‌ ಸಾಂಪ್ರದಾಯಿಕ ಮೋಟರ್‌ ಗ್ರೇಡರ್‌ಗಳಿಗೆ ಹೋಲಿಸಿದರೆ ಶೂನ್ಯ ಹೊಂದಾಣಿಕೆಯೊಂದಿಗೆ 40% ಅಧಿಕ ಗ್ರೇಡಿಂಗ್‌ ಅನ್ನು ನೀಡುತ್ತದೆ.

ಈ ಪ್ರಾಡಕ್ಟ್‌ ಒಂದು ವರ್ಷದ, ಅನಿಯಮಿತ ಗಂಟೆಗಳ ವಾರಂಟಿಯೊಂದಿಗೆ ಲಭ್ಯವಿದೆ. ದುಬಾರಿ ರಿಪೇರಿಗಳು ಬಂದಾಗ ಗ್ರಾಹಕರ ಆತಂಕವನ್ನು ಇದು ನಿವಾರಿಸುತ್ತದೆ. ಇದು ಕಠಿಣ ಪರೀಕ್ಷೆ ಹಾಗೂ ಅತ್ಯುತ್ತಮ ಭಾಗಗಳ ಸೋರ್ಸಿಂಗ್‌ ಹಾಗೂ ಮೆಶಿನ್‌ ವಿನ್ಯಾಸದ ಸರಳತೆಯಿಂದ ಬೆಂಬಲಿತವಾದ, ಮಹಿಂದ್ರಾದವರ ಎಂಜಿನಿಯರಿಂಗ್‌ ಹಾಗೂ ಮ್ಯಾನ್ಯೂಫ್ಯಾಕ್ಚರಿಂಗ್‌ ಕ್ಷಮತೆಯ ಕಾರಣದಿಂದ ಸಾಧ್ಯವಾಗಿದೆ.

G90 ಒರಟು [ಉಬ್ಬು-ತಗ್ಗು] ಭೂಪ್ರದೇಶಗಳಲ್ಲಿ ಹಾಗೂ ಕಷ್ಟಕರವಾದ ಬಳಕೆಗಳಿಗಾಗಿ ಕಠಿಣ ಪರಿಕ್ಷೆಗೆ ಒಳಗಾಗಿದೆ. ಇದನ್ನು ಎಲ್ಲಾ ಕಾರ್ಯಕ್ಷಮತೆ, ಸುರಕ್ಷತೆ ಹಾಗೂ ವಿಶ್ವಾಸಾರ್ಹತೆಯ ಮಾನದಂಡಗಳ ಮೇಲೆ ಮೌಲ್ಯೀಕರಿಸಲಾಗಿದೆ ಹಾಗೂ ವಿಶ್ವದಾದ್ಯಂತ ಸಾಟಿಯಿಲ್ಲದ ವ್ಯಾಪ್ತಿಯನ್ನು ಹೊಂದಿರುವ ಮಹಿಂದ್ರಾದ 60+ಡೀಲರ್‌ ಸೇಲ್ಸ್‌ ಹಾಗೂ ಸರ್ವಿಸ್‌ ನೆಟ್‌ವರ್ಕ್‌ನಿಂದ ಬೆಂಬಲಿತವಾಗಿದೆ. ಇದು ಅತ್ಯುತ್ತಮ ಟೆಕ್ನಾಲಾಜಿಯಿಂದ ಸಿದ್ದಗೊಂಡಿದ್ದು, ಸಾಟಿಯಿಲ್ಲದ ಗುಣಮಟ್ಟ, ಅದ್ಭುತ ಸ್ಟೈಲ್‌, ಆಪರೇಟರ್‌ ಸೌಕರ್ಯ ಹಾಗೂ ಇದರ ಆವಿಷ್ಕಾರಿ ಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿ - DiGiSense ನೊಂದಿಗೆ ಸಂಯೋಜಿಸಲ್ಪಟ್ಟಿದೆ.

ಮಹಿಂದ್ರಾ RoadMaster G90 ಅನ್ನು ಪುಣೆಯ ಚಕನ್‌ನಲ್ಲಿರುವ ಮಹಿಂದ್ರಾದ ಅತ್ಯಾಧುನಿಕ ಸೌಲಭ್ಯದಲ್ಲಿ ತಯಾರಿಸಲಾಗುತ್ತಿದೆ. ಭಾರತದ ಒರಟು ಭೂಪ್ರದೇಶ ಹಾಗೂ ಭಾರಿ ಬಳಕೆಯನ್ನು ತಡೆದುಕೊಳ್ಳಲು ಸೂಕ್ತವಾಗುವಂತೆ ನಿರ್ಮಿಸಲಾದ ಈ ಪ್ರಾಡಕ್ಟ್‌ ಅನ್ನು ಅಭಿವೃದ್ಧಿಪಡಿಸಲು ಮಹಿಂದ್ರಾದ ಪ್ರಾಡಕ್ಟ್‌ ಡೆವಲಪ್‌ಮೆಂಟ್‌ ಟೀಮ್‌ ವ್ಯಾಪಕ ಗ್ರಾಹಕರ ಒಳನೋಟ ಹಾಗೂ ಪ್ರತಿಕ್ರಿಯೆಯನ್ನು ಬಳಸಿಕೊಂಡಿದೆ. ಇದಲ್ಲದೇ ಆಧುನಿಕ ವೆಹಿಕಲ್‌ ಸಿಸ್ಟಮ್‌ಗಳು ಹಾಗೂ ಟೆಕ್ನಾಲಾಜಿಗಳನ್ನು ಬಳಸಿಕೊಂಡು ಎಲ್ಲಾ ಉಚಿತ ವೈಶಿಷ್ಯಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡುತ್ತದೆ.

ಮಹೀಂದ್ರಾ ಬಗ್ಗೆ


ಮಹಿಂದ್ರಾ ಗ್ರೂಪ್‌ ಆವಿಷ್ಕಾರಿ ಮೊಬಿಲಿಟಿ ಪರಿಹಾರಗಳ ಮೂಲಕ ಜನರ ಏಳಿಗೆಗಾಗಿ ಶ್ರಮಿಸಲು, ಗ್ರಾಮೀಣ ಪ್ರದೇಶದ ಸಮೃದ್ಧಿಯನ್ನು ಬಲಿಷ್ಠಗೊಳಿಸಲು, ನಗರ ಜೀವನವನ್ನು ಸೊಗಸಾಗಿಸಲು, ಹೊಸ ಬಿಸಿನೆಸ್‌ ಅನ್ನು ಅಭಿವೃದ್ಧಿಪಡಿಸಲು ಗಮನ ನೀಡುತ್ತದೆ.

ಭಾರತದ ಮುಂಬೈ ಮೂಲದ USD 19 ಬಿಲಿಯನ್‌ ಮಲ್ಟಿನ್ಯಾಶನಲ್ ಗ್ರೂಪ್‌, ಮಹಿಂದ್ರಾ 100ಕ್ಕೂ ಹೆಚ್ಚು ದೇಶಗಳಲ್ಲಿ 200,000ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶವನ್ನು ಒದಗಿಸಿದೆ. ಟ್ರ್ಯಾಕ್ಟರ್‌ಗಳು, ಯುಟಿಲಿಟಿ ವಾಹನಗಳು, ಇನ್‌ಫಾರ್ಮೇಷನ್‌ ಟೆಕ್ನಾಲಾಜಿ, ಫೈನಾನ್ಶಿಯಲ್‌ ಸೇವೆಗಳು ಹಾಗೂ ವೆಕೇಶನ್‌ ಓನರ್‌ಶಿಪ್‌ನಲ್ಲಿ ಲೀಡರ್‌ಶಿಪ್‌ ಸ್ಥಾನವನ್ನು ಪಡೆದ, ಮಹಿಂದ್ರಾ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುವ ಪ್ರಮುಖ ಉದ್ಯಮವಾಗಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಕೃಷಿವ್ಯವಸಾಯ, ಏರೋಸ್ಪೇಸ್‌ ಘಟಕಗಳು, ಕನ್ಸಲ್ಟಿಂಗ್‌ ಸೇವೆಗಳು, ಡಿಫೆನ್ಸ್‌ ಎನರ್ಜಿ, ಔದ್ಯೋಗಿಕ ಉಪಕರಣ, ಲಾಜಿಸ್ಟಿಕ್‌ಗಳು, ರಿಯಲ್‌ ಎಸ್ಟೇಟ್‌, ರಿಟೇಲ್‌, ಸ್ಟೀಲ್‌, ಕಮರ್ಷಿಯಲ್‌ ವಾಹನಗಳು, ಹಾಗೂ ಟೂ ವ್ಹೀಲರ್‌ಗಳ ಉದ್ಯಮಗಳಲ್ಲಿ ಪರಿಣತಿಯನ್ನು ಹೊಂದಿದೆ.

2015ರಲ್ಲಿ, ಮಹಿಂದ್ರಾ ಆ್ಯಂಡ್‌ ಮಹಿಂದ್ರಾ ಎಕಾನಾಮಿಕ್‌ ಟೈಮ್ಸ್‌ನ ಅಧ್ಯಯನದಲ್ಲಿ ಭಾರತದಲ್ಲಿ CSRಗಾಗಿ ಸರ್ವಶ್ರೇಷ್ಠ ಕಂಪನಿ ಎಂದು ಮಾನ್ಯತೆ ನೀಡಿತು. 2014ರಲ್ಲಿ ಮಹಿಂದ್ರಾ ಫೋರ್ಬಸ್‌ ಗ್ಲೋಬಲ್‌ 2000ರಲ್ಲಿ ವಿಶೇಷ ಸ್ಥಾನವನ್ನು ಪಡೆದಿತ್ತು, ರೆವಿನ್ಯೂ, ಪ್ರಾಫಿಟ್‌, ಅಸೆಟ್ಸ್‌ ಹಾಗೂ ಮಾರ್ಕೆಟ್‌ ವ್ಯಾಲ್ಯೂ ಮೂಲಕ ಅಳೆಯಲಾದ ವಿಶ್ವದ ಅತಿದೊಡ್ಡ, ಅತ್ಯಂತ ಶಕ್ತಿಶಾಲಿ ಪಬ್ಲಿಕ್‌ ಕಂಪನಿಗಳ ಸಮಗ್ರ ಪಟ್ಟಿಯಲ್ಲಿ ಸೇರಿದೆ. ಮಹಿಂದ್ರಾ ಗ್ರೂಪ್ 2013ರಲ್ಲಿ ಎಮರ್ಜಿಂಗ್‌ ಮಾರ್ಕೆಟ್ಸ್‌ ವಿಭಾಗದಲ್ಲಿ ಫೖನಾನ್ಶಿಯಲ್‌ ಟೈಮ್ಸ್ ನ ‘ಬೋಲ್ಡ್‌ನೆಸ್‌ ಇನ್‌ ಬಿಸಿನೆಸ್‌’ ಅವಾರ್ಡ್‌ ಅನ್ನು ಸಹ ಪಡೆದುಕೊಂಡಿದೆ.

ನಮ್ಮನ್ನು www.mahindraconstructionequipment.comನಲ್ಲಿ ನಮ್ಮನ್ನು ಭೇಟಿ ಮಾಡಿ

ನಮ್ಮ ಸೋಶಿಯಲ್‌ ಮೀಡಿಯಾ ಚ್ಯಾನೆಲ್‌ಗಳು :

ಫೇಸ್‌ಬುಕ್‌ - https://www.facebook.com/MahindraCE
ಟ್ವಿಟರ್‌ - https://twitter.com/Mahindra_CE
ಯೂಟ್ಯೂಬ್‌ - https://www.youtube.com/channel/UCRsspxEKEwWvnLZ4BfX6WpA
ಲಿಂಕ್ಡ್ಇನ್‌ - https://in.linkedin.com/company/mahindraconstructionequipment
ಇನ್ಸ್ಟಾಗ್ರಾಂ - https://www.instagram.com/mahindraconstructionequipment/

ಮಹಿಂದ್ರಾ ರೋಡ್‌ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಸೆಗ್ಮೆಂಟ್‌ಗಾಗಿ ತನ್ನ ಶ್ರೇಣಿಯನ್ನು ವಿಸ್ತರಿಸಿದೆ.

ನಿರ್ಮಾಣ ಸಲಕರಣೆ ವ್ಯಾಪಾರದ ಅಡಿಯಲ್ಲಿ ಹೊಸ ಮೋಟಾರ್ ಗ್ರೇಡರ್ - ಮಹೀಂದ್ರಾ ರೋಡ್‌ಮಾಸ್ಟರ್ G90 ಅನ್ನು ಪ್ರಾರಂಭಿಸುತ್ತದೆ

ಡಿಸೆಂಬರ್‌ 10,2018, ಪುಣೆ : USD 19 ಬಿಲಿಯನ್‌ ಮಹಿಂದ್ರಾ ಗ್ರೂಪ್‌ನ ಭಾಗವಾಗಿರುವ, ಮಹಿಂದ್ರಾ ಆ್ಯಂಡ್‌ ಮಹಿಂದ್ರಾ ಲಿಮಿಟೆಡ್‌, ಇಂದು ತನ್ನ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಬಿಸಿನೆಸ್‌ನ ಅಡಿಯಲ್ಲಿ ಮತ್ತೊಂದು ಮೋಟಾರ್‌ ಗ್ರೇಡರ್‌ - ಮಹಿಂದ್ರಾ RoadMaster G90ಯ ಬಿಡುಗಡೆ ಮಾಡುವುದರೊಂದಿಗೆ ತನ್ನ ರೋಡ್‌ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ನ ವಿಸ್ತರಣೆಯನ್ನು ಘೋಷಿಸಿದೆ.

ಬೌಮಾಕಾನ್‌ ಎಕ್ಸ್‌ಪೋ 2018ರಲ್ಲಿ ಮಾತನಾಡಿದ ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ನ ಬಿಸಿನೆಸ್‌ ಹೆಡ್‌ ಮನಿಶ್‌ ಅರೋರಾ, ‘‘ನಮ್ಮ ಗ್ರಾಹಕರಿಗೆ ವಿಶಿಷ್ಟ ಪ್ರಾಡಕ್ಟ್‌ಗಳು ಹಾಗೂ ಸೇವೆಗಳನ್ನು ಒದಗಿಸುವ ಮಹಿಂದ್ರಾದ ದೂರದೃಷ್ಟಿಗೆ ಅನುಗುಣವಾಗಿ, ಇಂದು ನಾವು ಮಹಿಂದ್ರಾ RoadMaster G90 ಮೋಟರ್‌ ಗ್ರೇಡರ್‌ ಅನ್ನು ಬಿಡುಗಡೆ ಮಾಡಿದ್ದೇವೆ. ಇದು ವೇಗವಾಗಿ ಅಭಿವೃದ್ಧಿಹೊಂದುತ್ತಿರುವ ರೋಡ್‌ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಸೆಗ್ಮೆಂಟ್‌ನಲ್ಲಿ ಮತ್ತೊಂದು ಆವಿಷ್ಕಾರವಾಗಲಿದೆ. ಈ ಪ್ರಾಡಕ್ಟ್‌ ಅನ್ನು ರೋಡ್‌ ಕಾಂಟ್ರ್ಯಾಕ್ಟರ್‌ ಬಳಗದ ಅಗತ್ಯತೆಗಳ ಆಳವಾದ ವಿವೇಚನೆಯ ನಂತರ ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ ಹಾಗೂ ಅಭಿವೃದ್ಧಿಪಡಿಸಲಾಗಿದೆ’’ ಎಂದು ಹೇಳಿದರು.

G90 ಒರಟು [ಉಬ್ಬು-ತಗ್ಗು] ಭೂಪ್ರದೇಶಗಳಲ್ಲಿ ಹಾಗೂ ಕಷ್ಟಕರವಾದ ಬಳಕೆಗಳಿಗಾಗಿ ಕಠಿಣ ಪರಿಕ್ಷೆಗೆ ಒಳಗಾಗಿದೆ. ಇದನ್ನು ಎಲ್ಲಾ ಕಾರ್ಯಕ್ಷಮತೆ, ಸುರಕ್ಷತೆ ಹಾಗೂ ವಿಶ್ವಾಸಾರ್ಹತೆಯ ಮಾನದಂಡಗಳ ಅಡಿಯಲ್ಲಿ ಮೌಲ್ಯೀಕರಿಸಲಾಗಿದೆ ಹಾಗೂ ವಿಶ್ವದಾದ್ಯಂತ ಸಾಟಿಯಿಲ್ಲದ ವ್ಯಾಪ್ತಿಯನ್ನು ಹೊಂದಿರುವ ಮಹಿಂದ್ರಾದ 60ಕ್ಕೂ ಅಧಿಕ ಡೀಲರ್‌ ಸೇಲ್ಸ್‌ ಹಾಗೂ ಸರ್ವಿಸ್‌ ನೆಟ್‌ವರ್ಕ್‌ನಿಂದ ಬೆಂಬಲಿತವಾಗಿದೆ. ಇದಕ್ಕಾಗಿ ಸೂಕ್ತವಾದ ಟೆಕ್ನಾಲಾಜಿಯನ್ನು ಬಳಸಲಾಗಿದ್ದು, ಸಾಟಿಯಿಲ್ಲದ ಗುಣಮಟ್ಟ, ಅದ್ಭುತ ಸ್ಟೈಲ್‌, ಆಪರೇಟರ್‌ ಸೌಕರ್ಯ ಹಾಗೂ ಇತರ ಅವಿಷ್ಕಾರಿ ಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿ - DiGiSense ನೊಂದಿಗೆ ಸಂಯೋಜಿಸಲ್ಪಟ್ಟಿದೆ.

Mahindra RoadMaster G90 ಕುರಿತು
G90 ಒರಟು [ಉಬ್ಬು-ತಗ್ಗು] ಭೂಪ್ರದೇಶಗಳಲ್ಲಿ ಹಾಗೂ ಕಷ್ಟಕರವಾದ ಬಳಕೆಗಳಿಗಾಗಿ ಕಠಿಣ ಪರಿಕ್ಷೆಗೆ ಒಳಗಾಗಿದೆ. ಇದನ್ನು ಎಲ್ಲಾ ಕಾರ್ಯಕ್ಷಮತೆ, ಸುರಕ್ಷತೆ ಹಾಗೂ ವಿಶ್ವಾಸಾರ್ಹತೆಯ ಮಾನದಂಡಗಳ ಅಡಿಯಲ್ಲಿ ಮೌಲ್ಯೀಕರಿಸಲಾಗಿದೆ ಹಾಗೂ ವಿಶ್ವದಾದ್ಯಂತ ಸಾಟಿಯಿಲ್ಲದ ವ್ಯಾಪ್ತಿಯನ್ನು ಹೊಂದಿರುವ ಮಹಿಂದ್ರಾದ 60ಕ್ಕೂ ಅಧಿಕ ಡೀಲರ್‌ ಸೇಲ್ಸ್‌ ಹಾಗೂ ಸರ್ವಿಸ್‌ ನೆಟ್‌ವರ್ಕ್‌ನಿಂದ ಬೆಂಬಲಿತವಾಗಿದೆ. ಇದಕ್ಕಾಗಿ ಸೂಕ್ತವಾದ ಟೆಕ್ನಾಲಾಜಿಯನ್ನು ಬಳಸಲಾಗಿದ್ದು, ಸಾಟಿಯಿಲ್ಲದ ಗುಣಮಟ್ಟ, ಅದ್ಭುತ ಸ್ಟೈಲ್‌, ಆಪರೇಟರ್‌ ಸೌಕರ್ಯ ಹಾಗೂ ಇತರ ಅವಿಷ್ಕಾರಿ ಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿ - DiGiSense ನೊಂದಿಗೆ ಸಂಯೋಜಿಸಲ್ಪಟ್ಟಿದೆ.


ಮಹಿಂದ್ರಾ RoadMaster G90 ಅನ್ನು ಪುಣೆಯ ಚಕನ್‌ನಲ್ಲಿರುವ ಮಹಿಂದ್ರಾದ ಅತ್ಯಾಧುನಿಕ ಸೌಲಭ್ಯದಲ್ಲಿ ತಯಾರಿಸಲಾಗುತ್ತಿದೆ. ಭಾರತದ ಒರಟು ಭೂಪ್ರದೇಶ ಹಾಗೂ ಭಾರಿ ಬಳಕೆಯನ್ನು ತಡೆದುಕೊಳ್ಳಲು ನಿರ್ಮಿಸಲಾದ ಈ ಪ್ರಾಡಕ್ಟ್‌ ಅನ್ನು ಅಭಿವೃದ್ಧಿಪಡಿಸಲು ಮಹಿಂದ್ರಾದ ಪ್ರಾಡಕ್ಟ್‌ ಡೆವಲಪ್‌ಮೆಂಟ್‌ ಟೀಮ್‌ ಗ್ರಾಹಕರ ಅಭಿಪ್ರಾಯ ಹಾಗೂ ಪ್ರತಿಕ್ರಿಯೆಯನ್ನು ಬಳಸಿಕೊಂಡಿದೆ. ಇದಲ್ಲದೇ ಆಧುನಿಕ ವೆಹಿಕಲ್‌ ಸಿಸ್ಟಮ್‌ಗಳು ಹಾಗೂ ಟೆಕ್ನಾಲಾಜಿಗಳನ್ನು ಬಳಸಿಕೊಂಡು ಎಲ್ಲಾ ಉಚಿತ ವೈಶಿಷ್ಯಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ನೀಡುತ್ತದೆ.


ಮಹಿಂದ್ರಾದ ಕುರಿತು


ಮಹಿಂದ್ರಾ ಗ್ರೂಪ್‌ USD 19 ಬಿಲಿಯನ್ ಕಂಪನಿಗಳ ಒಕ್ಕೂಟವಾಗಿದ್ದು ಇದು ಅವಿಷ್ಕಾರಿ ಮೊಬಿಲಿಟಿ ಪರಿಹಾರಗಳ ಮೂಲಕ ಜನರ ಏಳಿಗೆಯನ್ನು ಮಾಡಲು, ಗ್ರಾಮೀಣ ಸಮೃದ್ಧಿಯನ್ನು ಬಲಿಷ್ಠಗೊಳಿಸಲು, ನಗರ ಜೀವನವನ್ನು ವರ್ಧಿಸಲು, ಹೊಸ ಬಿಸಿನೆಸ್‌ ಅನ್ನು ಅಭಿವೃದ್ಧಿಪಡಿಸಲು ಹಾಗೂ ಸಮುದಾಯವನ್ನು ಪೋಷಿಸಲು ಸಾಧ್ಯವಾಗಿಸುತ್ತದೆ. ಇದು ಭಾರತದಲ್ಲಿ ಯುಟಿಲಿಟಿ ವಾಹನಗಳು, ಇನ್‌ಫಾರ್ಮೇಷನ್‌ ಟೆಕ್ನಾಲಾಜಿ, ಫೈನಾನ್ಶಿಯಲ್‌ ಸೇವೆಗಳು ಹಾಗೂ ವೆಕೆಶನ್‌ ಓನರ್‌ಶಿಪ್‌ನಲ್ಲಿ ಲೀಡರ್‌ಶಿಪ್‌ ಪಾತ್ರವನ್ನು ನಿರ್ವಹಿಸುತ್ತಿದೆ ಹಾಗೂ ಪರಿಮಾಣದ ಪ್ರಕಾರ ವಿಶ್ವದ ಅತಿದೊಡ್ಡ ಟ್ರ್ಯಾಕ್ಟರ್‌ ಕಂಪನಿಯಾಗಿದೆ. ಇದು ಕೃಷಿವ್ಯವಸಾಯ, ಘಟಕಗಳು, ಕಮರ್ಷಿಯಲ್‌ ವೆಹಿಕಲ್‌ಗಳು, ಕನ್ಸಲ್ಟಿಂಗ್‌ ಸೇವೆಗಳು, ಎನರ್ಜಿ, ಔದ್ಯೋಗಿಕ ಉಪಕರಣ, ಲಾಜಿಸ್ಟಿಕ್‌ಗಳು, ರಿಯಲ್‌ ಎಸ್ಟೇಟ್‌, ಸ್ಟೀಲ್‌, ಎರೋಸ್ಪೇಸ್‌, ಡಿಫೆನ್ಸ್‌ ಹಾಗೂ ಟು ವ್ಹೀಲರ್‌ಗಳಲ್ಲಿ ಕ್ಷೇತ್ರದಲ್ಲಿ ಮುಖ್ಯವಾಗಿ ಗುರುತಿಸಿಕೊಂಡಿದೆ. ಭಾರತದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮಹಿಂದ್ರಾ 100 ದೇಶಗಳಾದ್ಯಂತ 200,000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ.

ಮಹಿಂದ್ರಾದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿwww.mahindraconstructionequipment.com / Twitter and Facebook: @MahindraCE

ಮೀಡಿಯಾ ಸಂಪರ್ಕಕ್ಕೆ:
ರುಚಿರ್‌ ಅಗರ್‌ವಾಲ್‌
ಮಹಿಂದ್ರಾ ಆ್ಯಂಡ್‌ ಮಹಿಂದ್ರಾ ಲಿಮಿಟೆಡ್‌

ಆಫೀಸ್‌ ಡೈರೆಕ್ಟ್‌ ಲೈನ್‌ - + 91 22 33133065
ಆಫೀಸ್‌ ಇಮೇಲ್‌ ವಿಳಾಸ - [email protected]