with you hamesha - 1800 209 6006
with you hamesha - 1800 209 6006 

ಕಂಪನಿಯ ವಿವರಣೆ

ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌

ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ US $17.8 ಬಿಲಿಯನ್‌ ಡಾಲರ್‌ ಬ್ರ್ಯಾಂಡ್‌ ಆಗಿರುತ್ತದೆ ಹಾಗೂ ಮಹಿಂದ್ರಾ ಗ್ರೂಪ್‌ ಕಂಪನಿಗಳು ಅಭಿವೃದ್ಧಿ ಹೊಂದುತ್ತಿರುವ ಜಾಗತಿಕ ಒಕ್ಕೂಟವಾಗಿರುತ್ತದೆ. ಜಗತ್ತಿನಾದ್ಯಂತ 100 ದೇಶಗಳಲ್ಲಿ 200,000 ಉದ್ಯೋಗಿಗಳೊಂದಿಗೆ ಉನ್ನತ ಸ್ಥಾನದಲ್ಲಿ ಹಾಗೂ ಹೆಮ್ಮೆಯಿಂದ ನಿಂತಿರುವ, ದ ಮಹೀಂದ್ರಾ ಗ್ರೂಪ್‌ ಫೋಬರ್ಸ್‌ ವಿಶ್ವದ ಟಾಪ್‌ 2000 ಅತ್ಯಂತ ಶಕ್ತಿಶಾಲಿ ಬ್ರ್ಯಾಂಡ್‌ಗಳ ಪಟ್ಟಿಯಲ್ಲಿದೆ.ಗ್ರೂಪ್‌ ಮೊಬಿಲಿಟಿ, ಗ್ರಾಮೀಣ ಸಮೃದ್ಧಿ, ಐಟಿ, ಹಣಕಾಸು ಸೇವೆಗಳು, ಕ್ಲೀನ್‌ ಎನರ್ಜಿ, ರಕ್ಷಣೆ,ಆತಿಥ್ಯ, ರಿಯಲ್‌ ಎಸ್ಟೇಟ್‌ ಹಾಗೂ ರಿಟೇಲ್‌ ಒಳಗೊಂಡು 20 ಪ್ರಮುಖ ಕೈಗಾರಿಕೆಗಳಾದ್ಯಂತ ಪ್ರಬಲವಾದ ಜಾಗತಿಕ ಉಪಸ್ಥಿತಿಯನ್ನು ಹೊಂದಿದೆ.

‘‘ ರೈಜ್‌’’ನ ಮೂಲ ಮನೋಭಾವ ಹಾಗೂ ದಶಕಗಳಿಂದ ಅತ್ಯುತ್ತಮ ಶ್ರೇಣಿಯ ಕೃಷಿ ಉಪಕರಣ ಹಾಗೂ ಯುಟಿಲಿಟಿ ವಾಹನವನ್ನು ತಯಾರಿಸುವ ಅದರ ವ್ಯಾಪಕ ಅನುಭವದೊಂದಿಗೆ, ದಿಟ್ಟತನದಿಂದ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ನಿರ್ಮಾಣ ಉದ್ಯಮದಲ್ಲಿ ಸಾಹಸ ಸೃಷ್ಟಿಸಿದೆ. ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ‘‘ ರೈಜ್‌’’ ಮೂಲಕ ಸಾಮಾನ್ಯ ಜನರಿಗೆ ಸಹಾಯ ಮಾಡಲು ಉತ್ತಮ ಪ್ರಾಡಕ್ಟಗಳನ್ನು ರಚಿಸುವ ಅನ್ವೇಷಣೆಯಲಿದ್ದು, ತನ್ನ ಮಶಿನ್‌ಗಳಲ್ಲಿ ಉತ್ಕೃಷ್ಟ ತಂತ್ರಜ್ಞಾನವನ್ನು ಬಳಸುವ ಪ್ರಾಡಕ್ಟ್‌ಗಳನ್ನು ನಿಮಗಾಗಿ ತಂದಿದೆ. ಭಾರತದ ನಿರ್ಮಾಣ ಉದ್ಯಮದಲ್ಲಿ ಹಿಂದೆಂದೂ ಕಾಣದಂತಹ ಟೆಕ್ನಾಲಾಜಿಯನ್ನು ಇದರಲ್ಲಿ ಬಳಸಲಾಗಿದೆ.

ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಭಾರತದಲ್ಲಿ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಸೆಗ್ಮೆಂಟ್‌ನಲ್ಲಿ ಕ್ರಾಂತಿಯನ್ನುಂಟುಮಾಡುವ ಅತ್ಯುತ್ತಮ ಪ್ರಾಡಕ್ಟ್‌ಗಳು ಹಾಗೂ ಸೇವೆಗಳನ್ನು ಒದಗಿಸಲು ಮುಂಚೂಣಿಯಲ್ಲಿದೆ. ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ B2B ವರ್ಟಿಕಲ್‌ನ ಅಡಿಯಲ್ಲಿ ಬರುತ್ತದೆ ಹಾಗೂ ದೇಶದಾದ್ಯಂತ ಡೀಲರ್‌ಗಳು ಹಾಗೂ ಸರ್ವಿಸ್‌ ಸೆಂಟರ್‌ಗಳ ಅದರ ಪ್ರಬಲವಾದ ನೆಟ್‌ವರ್ಕ್‌ ಮೂಲಕ ಬೆಂಬಲಿತವಾಗಿದೆ.

ಫುಣೆಯ ಚಕನ್‌ನಲ್ಲಿರುವ 10,000 ಚದರ ಮೀಟರ್‌ ವಿಸ್ತೀರ್ಣದ ಮಹಿಂದ್ರಾ ಪ್ಲ್ಯಾಂಟ್‌ನಲ್ಲಿ ಕಂಪನಿಯ ಮ್ಯಾನ್ಯುಫ್ಯಾಕ್ಷರಿಂಗ್‌ ಯೂನಿಟ್‌ ಅನ್ನು ಪ್ರಾರಂಭಿಸುವುದರೊಂದಿಗೆ ಮಹಿಂದ್ರಾ ಗ್ರೂಪ್‌ ಉದ್ಯಮಕ್ಕೆ ಪ್ರವೇಶಿಸಿತು. ದೋಷರಹಿತ ಫಿನಿಶ್‌ನೊಂದಿಗೆ ಉತ್ಕೃಷ್ಟ ಪ್ರಾಡಕ್ಟ್‌ ಅನ್ನು ನಿರ್ಮಿಸಲು ಅತ್ಯಾಧುನಿಕ ಟೆಕ್ನಾಲಾಜಿ ಹಾಗೂ ಸಂಪೂರ್ಣ ಆಟೋಮ್ಯಾಟಿಕ್‌ ರೋಬೋಟಿಕ್‌ ವೆಲ್ಡಿಂಗ್‌ ಯೂನಿಟ್‌ಗಳನ್ನು ಬಳಸಲಾಗುತ್ತದೆ. ಪ್ರತಿಯೊಂದು ಪ್ರಾಡಕ್ಟ್‌ ಅನ್ನು ಹೊರತರುವ ಮೊದಲು ಎಡ್ವಾನ್ಸ್‌ಡ್‌ NOVA-C ಅಳವಡಿಕೆಯೊಂದಿಗೆ ಕಟ್ಟುನಿಟ್ಟಾದ ಹಾಗೂ ಗುಣಮಟ್ಟದ ಪರಿಶೀಲನಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ..

ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಅನೇಕ ಜನರಿಗೆ ‘‘ರೈಜ್‌’’ ನಲ್ಲಿ ಸಹಾಯ ಮಾಡಿ ತಮ್ಮ ಉದ್ಯಮದಲ್ಲಿ ಲೀಡರ್‌ ಆಗುವ ಮಹತ್ವಾಕಾಂಕ್ಷೆಯನ್ನು ಪೂರೈಸುತ್ತ ಗ್ರೂಪ್‌ನ ವ್ಯಾಲ್ಯೂಗಳನ್ನು ಎತ್ತಿಹಿಡಿಯಲು ತಮ್ಮ ಪೂರ್ವವರ್ತಿಗಳ ಸಿದ್ಧಾಂತಗಳನ್ನು ಅನುಸರಿಸಲು ಬಯಸುತ್ತದೆ.

ಮಹಿಂದ್ರಾ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಡಿವಿಜನ್‌ a ISO 9001:2015 ಪ್ರಮಾಣೀಕೃತವಾಗಿರುತ್ತದೆ.