with you hamesha - 1800 209 6006
with you hamesha - 1800 209 6006 


ಪ್ರಾಡಕ್ಟ್‌ಗಳು ಹಾಗೂ ಸೊಲ್ಯೂಷನ್ ಗಳು

ಮಹೀಂದ್ರಾ ನಿರ್ಮಾಣ ಸಲಕರಣೆ - ಉತ್ಪನ್ನ ವರ್ಗ

ಹಲವು ವರ್ಷಗಳಿಂದ ಪ್ರಪಂಚದಾದ್ಯಂತ ಟೆಕ್ನಾಲಾಜಿ ತ್ವರಿತ ಗತಿಯಲ್ಲಿ ಬದಲಾಗುತ್ತಿದ್ದರೂ ಭಾರತದಲ್ಲಿ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಒಂದೇ ಹಂತದಲ್ಲಿತ್ತು. ಹೆಚ್ಚುತ್ತಿರುವ ಇಂಧನ ವೆಚ್ಚಗಳು ಹಾಗೂ ಹೆಚ್ಚುತ್ತಿರುವ ಆಪರೇಶನಲ್‌ ವೆಚ್ಚಗಳೊಂದಿಗೆ, ಗ್ರಾಹಕರ ಲಾಭಕ್ಕೆ ತಡೆಯೊಡ್ಡುತ್ತಿವೆ.ಭಾರತದ ಪ್ರಮುಖ ಆಟೋಮೋಟಿವ್‌ ಹಾಗೂ ಟ್ರ್ಯಾಕ್ಟರ್‌ ತಯಾರಾಕರಾದ ಮಹಿಂದ್ರಾದ ಡಿಸೈನರ್‌ಗಳು, ಪ್ರಸ್ತುತ ಸನ್ನಿವೇಶವನ್ನು ನೋಡಿದ್ದಾರೆ ಹಾಗೂ ವಿಶೇಷವಾಗಿ ಭಾರತೀಯ ಬಳಕೆಗಾಗಿ ನಮ್ಮದೇ ಆದ, ಸ್ವಂತ-ವಿನ್ಯಾಸದ ಕನ್‌ಸ್ಟ್ರಕ್ಷನ್‌ ಇಕ್ವಿಪ್‌ಮೆಂಟ್‌ ಟೆಕ್ನಾಲಾಜಿಯಲ್ಲಿ ಕೆಲವು ಅವಿಷ್ಕಾರಗಳನ್ನು ಮಾಡಿದ್ದಾರೆ.

ಮಹೀಂದ್ರಾ ಅರ್ಥ್‌ಮಾಸ್ಟರ್

ಮಹಿಂದ್ರಾದ ಡಿಸೈನರ್‌ಗಳು ಟೆಕ್ನಾಲಾಜಿಯನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಪ್ರಸ್ತುತ ದಿನಗಳನ್ನು ನೋಡುವುದಾದರೆ,ನಾವು ಹೊಸ EarthMaster SX & VX ಅನ್ನು ಬಿಡುಗಡೆ ಮಾಡುವ ಮೂಲಕ ಬ್ಯಾಕ್‌ಹೋ ಲೋಡರ್‌ ವರ್ಗದಲ್ಲಿ ಆವಿಷ್ಕಾರವನ್ನು ಮಾಡಿದ್ದೇವೆ. ಅವುಗಳನ್ನು ಭಾರತೀಯ -ಬಳಕೆಗಳಿಗೆಸರಿಹೊಂದುವಂತೆ ಹಾಗೂ ಬ್ಯಾಕ್‌ಹೋ ವರ್ಗದಲ್ಲಿ ಎಲ್ಲಾ ಮಾನದಂಡಗಳನ್ನು ಪೂರೈಸಲು ಅನುಕೂಲವಾಗುವಂತೆ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. 55 kW (74 HP), CRDI ಮಹಿಂದ್ರಾ ಎಂಜಿನ್‌, ವರ್ಗದಲ್ಲಿ ಅತ್ಯುತ್ತಮ ಇಂಧನ ದಕ್ಷತೆ, ಹಾಗೂ ಉನ್ನತ ಮಟ್ಟದ ಬ್ಯಾಕ್‌ಹೋ ಪರ್ಫಾರ್ಮನ್ಸ್‌ನೊಂದಿಗೆ, EarthMaster SX & VX ನಿಮಗೆ ಅತ್ಯುತ್ತಮ ಉಳಿತಾಯವನ್ನೂ ನೀಡುತ್ತದೆ.

ಪರಂಪರೆಯ ಇತಿಹಾಸ ಹೊಂದಿರುವ ಬ್ರ್ಯಾಂಡ್‌ ಮಹಿಂದ್ರಾ ಸ್ವಾತಂತ್ರ್ಯ ಪೂರ್ವದಲ್ಲೇ ಅಸ್ತಿತ್ವಕ್ಕೆ ಬಂದಿದೆ. ಭಾರತದಲ್ಲಿ ಟ್ರಾನ್ಸ್‌ಪೋರ್ಟ್‌ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡುವ ಇತಿಹಾಸವನ್ನು ಗಮನಿಸಿದರೆ, ಮಹಿಂದ್ರಾ ಮತ್ತೊಮ್ಮೆ EarthMasterನೊಂದಿಗೆ ಅದ್ಭುತ ಸಾಧನೆಯನ್ನು ಸಾಧಿಸಿರುವುದು ಅರಿವಿಗೆ ಬರುತ್ತದೆ. EarthMaster SX & VX ಅನ್ನು ಭಾರತದಲ್ಲಿ ತಯಾರಿಸಲಾಗುತ್ತದೆ. ಅವುಗಳ ಎಂಜಿನ್‌ ಅನ್ನು ನಾಗ್‌ಪುರ್‌ದಲ್ಲಿ ತಯಾರಿಸಿದರೆ, ಉಳಿದ ಮಶಿನ್‌ಗಳನ್ನು ಪುಣೆ ಸಮೀಪವಿರುವ ನಮ್ಮ ಚಕನ್‌ ಪ್ಲ್ಯಾಂಟ್‌ನಲ್ಲಿ ತಯಾರಿಸಲಾಗುತ್ತದೆ ಹಾಗೂ ಜೋಡಿಸಲಾಗುತ್ತದೆ. ಇವುಗಳು ವಿಶ್ವದರ್ಜೆಯ ಆ್ಯಗ್ರಿಗೇಟ್‌ಗಳೊಂದಿಗೆ ಸ್ವದೇಶಿ ಮಶಿನ್‌ಗಳಾಗಿವೆ ಹಾಗೂ ಭಾರತೀಯ ಗ್ರಾಹಕರು ಹಾಗೂ ಅವರ ಆಗತ್ಯತೆಗಳ ಮೇಲೆ ವ್ಯಾಪಕವಾದ ಸಂಶೋಧನೆಗಳನ್ನು ನಡೆಸಿದ ನಂತರ ರಚಿಸಲಾಗಿದೆ.

EarthMasterಭಾರತದಲ್ಲಿ ಅತ್ಯುತ್ತಮವಾಗಿ ತನ್ನ ನೆಲೆಯನ್ನು ಭದ್ರಪಡಿಸಿಕೊಂಡಿದೆ ಹಾಗೂ 10 ವರ್ಷಗಳ ಹಿಂದೆ ಬಿಡುಗಡೆ ಮಾಡಲಾದ ಈ ವಾಹನ 5000ಕ್ಕೂ ಹೆಚ್ಚಿನ ಹೆಮ್ಮೆಯ ಭಾರತೀಯ ಗ್ರಾಹಕರನ್ನು ಹೊಂದಿದೆ. ಇದು ಕಳೆದ 10 ವರ್ಷಗಳಲ್ಲಿ ಭಾರತವನ್ನು ಸಶಕ್ತಗೊಳಿಸುವಲ್ಲಿ ನೆರವಾಗಿದೆ. ಏಕೆಂದರೆ ಇದನ್ನು ಭಾರತದಲ್ಲಿ, ಭಾರತೀಯರಿಂದ, ಹಾಗೂ ಭಾರತಕ್ಕಾಗಿಯೇ ತಯಾರಿಸಲಾಗಿದೆ.

ಮಾದರಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಹೀಂದ್ರಾ ರೋಡ್‌ಮಾಸ್ಟರ್


ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, 75% ರಸ್ತೆಗಳು ವಿಸ್ತರಣಾ ಯೋಜನೆಗಳು ಅಥವಾ ಗ್ರಾಮೀಣ/ಆರೆನಗರ ಯೋಜನೆಗಳಾಗಿದ್ದು ಇಲ್ಲಿ ಉತ್ಪಾದಕತೆಯನ್ನು ಸರಿಯಾಗಿ ಹೊಂದುವಂತೆ ಮಾಡುತ್ತವೆ. ಭಾರತೀಯ ರಸ್ತೆಗಳ ಹಾಗೂ ಅದರ ಇನ್ಫಾಸ್ಟ್ರಕ್ಚರ್ ನ ಒಂದು ವರ್ಷ-ಕಾಲದ ಆಳವಾದ ಅಧ್ಯಯನ, 20,000 ಕ್ಕೂ ಹೆಚ್ಚಿನ ದಿನಗಳ ಪ್ರಾಡಕ್ಟ್‌ ಅಭಿವೃದ್ಧಿ , ಹಾಗೂ ದೇಶದಾದ್ಯಂತ ವಿವಿಧ ಸ್ಥಳಗಳಲ್ಲಿ 6000ಕ್ಕೂ ಅಧಿಕ ಗಂಟೆಗಳ ವ್ಯಾಪಕ ಪರೀಕ್ಷೆಯೊಂದಿಗೆ, ಮಹಿಂದ್ರಾದ ಮೋಟರ್‌ ಗ್ರೇಡರ್‌ಗಳು ಅಭಿವೃದ್ಧಿಹೊಂದುತ್ತಿರುವ ಭಾರತವನ್ನು ನಿರ್ಮಿಸಲು ಅತ್ಯಂತ ಅನುಕೂಲಕರ ಮಶಿನ್‌ಗಳಾಗಿವೆ. 13ರಾಜ್ಯಗಳಾದ್ಯಂತ ರೋಡ್‌ ಕಾಂಟ್ರ್ಯಾಕ್ಟರ್‌ಗಳು , ಹಾಗೂ ಇತರ ಇಕೋ ಸಿಸ್ಟಮ್‌ ಸಂಸ್ಥೆಗಳು ಇದರಲ್ಲಿಒಳಗೊಂಡಿವೆ. 5000ಕ್ಕೂ ಅಧಿಕ ಪ್ರಬಲವಾದ ಮಹಿಂದ್ರಾ ಆರ್‌ ಆ್ಯಂಡ್‌ ಡಿ ಘಟಕದಿಂದ ವಿನ್ಯಾಸಗೊಳಿಸಲಾಗಿದೆ.

ಮಹಿಂದ್ರಾದ ವಿಶ್ವ-ದರ್ಜೆಯ ಚಕನ್‌ ಪ್ಲ್ಯಾಂಟ್‌ನಲ್ಲಿ ಇದನ್ನು ತಯಾರಿಸಲಾಗಿದೆ. ಪ್ರಮುಖ ರಚನಾತ್ಮಕ ಘಟಕಗಳಿಗಾಗಿ ರೊಬೋಟಿಕ್‌ ವೆಲ್ಡಿಂಗ್‌ ಟೆಕ್ನಾಲಾಜಿಯನ್ನು ಬಳಸಲಾಗುತ್ತದೆ.

ಮಾದರಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ